ಬಸ್ರೂರು: ವಿದ್ಯಾರ್ಥಿ ನಾಪತ್ತೆ
ಕುಂದಾಪುರ: ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಸ್ರೂರು ಮೂಲದ ವಿದ್ಯಾರ್ಥಿಬುಧವಾರ ಸಂಜೆ ನಾಪತ್ತೆಯಾದ ಘಟನೆ ನಡೆದಿದೆ.


ಬಸ್ರೂರು ರಿಕ್ಷಾ ಚಾಲಕ ರಾದ ನಾಗರಾಜ್ ತೋಳಾರ್ ಇವರ ಮಗ ಆಕಾಶ್ (15) ಎಂಬಾತನೇ ನಾಪತ್ತೆಯಾದವನು. ಕುಂದಾಪುರದಲ್ಲಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಆಕಾಶ್ ಈತ ಬುಧವಾರ ಸಂಜೆ ತನ್ನ ಸೈಕಲ್ಲಿನೊಂದಿಗೆ ಕಾಣೆಯಾಗಿದ್ದು ಇದುವರೆಗೂ ಮನೆಗೆ ಬಂದಿಲ್ಲ ಎಂದು ಮನೆಯವರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕರೆ 9880912146 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
