ಧಾರೆಯೆರೆಯುವ ವಿದ್ಯೆಯಿಂದ ಜನತಾ ಕಲ್ಯಾಣವಾಗುತ್ತದೆ – ಶ್ರೀ ವಿಧು ಶೇಖರಭಾರತಿ ಶ್ರೀಪಾದಂಗಳವರು
ಜನತಾ ಪದವಿಪೂರ್ವ ಕಾಲೇಜು, ಹೆಮ್ಮಾಡಿ ಇದರ ನೂತನ ವಸತಿ ನಿಲಯ ‘ಶ್ಲಾಘನ – ಶನಯ’ ಲೋಕಾರ್ಪಣೆ
ಹೆಮ್ಮಾಡಿ: ‘ತನ್ನಲ್ಲಿರುವ ವಿದ್ಯೆಯನ್ನು ತಾನು ಬಳಸಿಕೊಂಡು ಇತರರಿಗೂ ಅದರ ಧಾರೆ ಎರೆದಾಗ ಅದರ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ. ಪ್ರತಿಭೆ ಎಲ್ಲರಲ್ಲೂ ಇರುತ್ತದೆ, ಆದರೆ ಅದಕ್ಕೆ ತಕ್ಕ ಅವಕಾಶ, ವೇದಿಕೆ ಲಭಿಸಿದಾಗ ಮಾತ್ರ ಅದು ದೀಪದಂತೆ ಪ್ರಜ್ವಲಿಸುತ್ತದೆ’ ಎಂದು ಶೃಂಗೇರಿ ಮಠದ ಜಗದ್ಗುರು ಶ್ರೀ ವಿಧು ಶೇಖರಭಾರತಿ ಶ್ರೀಪಾದಂಗಳವರು ನುಡಿದರು.

ಅವರು ಹೆಮ್ಮಾಡಿ ಸಮೀಪದ ಸುಳ್ಸೆಯಲ್ಲಿ ಜನತಾ ಪದವಿ ಪೂರ್ವ ಕಾಲೇಜು, ಹೆಮ್ಮಾಡಿ ಇದರ ವಿದ್ಯಾರ್ಥಿಗಳಿಗಾಗಿ ನೂತನವಾಗಿ ನಿರ್ಮಾಣಗೊಂಡ ‘ಶ್ಲಾಘನ ಶನಯ’ ವಸತಿ ನಿಲಯ ಕಟ್ಟಡವನ್ನು ಜೂನ್. 25ರಂದು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ, ಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ಪ್ರಶಂಶಿಸಿದರು.

ಕಾರ್ಯಕ್ರಮದ ವಿಶೇಷ ಅಂಗವಾಗಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ, ಜನತಾ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾ ಗಣೇಶ್, ಕೋಟದ ಜನತಾ ಫಿಶ್ ಮಿಲ್ ಸಂಸ್ಥೆಯ ಮುಖ್ಯಸ್ಥ ಆನಂದ್. ಸಿ. ಕುಂದರ್, ವೇದ ಮೂರ್ತಿ ಲೋಕೇಶ್ ಅಡಿಗ, ಮಾಜಿ ಶಾಸಕ ಗೋಪಾಲ ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಜು. ಎಸ್. ಪೂಜಾರಿ ಉಪಸ್ಥಿತರಿದ್ದರು.

ವೇದಮೂರ್ತಿ ಲೋಕೇಶ್ ಅಡಿಗರು ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಗಣೇಶ್ ಮೊಗವೀರರ ಜೀವನಗಾಥೆಯನ್ನು ತಿಳಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು, ಉಪನ್ಯಾಸಕರಾದ ಉದಯ ನಾಯಕ್ ಸ್ವಾಗತಿಸಿದರು. ಖ್ಯಾತ ವಾಗ್ಮಿ ದಾಮೊದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.
