ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಅಗತ್ಯ- ಎಂ.ಎನ್ ಮಧ್ಯಸ್ಥ
307ನೇ ವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಅಭಿಯಾನ ಸಂಪನ್ನ

ಕೋಟ: ಮುಂದಿನ ತಲೆಮಾರಿಗಾಗಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಆ ಮೂಲಕ ಹಸಿರು ಕ್ರಾಂತಿ ಸೃಷ್ಟಿ ಸಾಧ್ಯ ಎಂದು ಶಿಕ್ಷಣ ತಜ್ಞ ಮಣೂರು ನರಸಿಂಹ ಮಧ್ಯಸ್ಥ ಹೇಳಿದರು.

ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಮಣೂರು,ಗೀತಾನಂದ ಫೌಂಡೇಶನ್ ಮಣೂರು,ಅನ್ನಪೂರ್ಣ ನರ್ಸರಿ ಪೇತ್ರಿ, ಸ್ಥಳೀಯ ಸಂಘಟನೆಯ ಸಹಯೋಗದೊಂದಿಗೆ 307ನೇ ವಾರದ ಪರಿಸರಸ್ನೇಹಿ ಹಸಿರುಹೆಜ್ಜೆ ಅಭಿಯಾನ ಕಾರ್ಯಕ್ರಮವನ್ನು ಮಕ್ಕಳಿಗೆ ಗಿಡ ಹಸ್ತಾಂತರಿಸಿ ಮಾತನಾಡಿ ಪರಿಸರದ ಬಗ್ಗೆ ಇಂದಿನ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಅವರು ಪಂಚವರ್ಣ ಸಂಘಟನೆ ಪರಿಸರದ ಬಗೆಗಿನಕಾಳಜಿಯನ್ನು ಪ್ರಶಂಸಿದರು. ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ ಮಯ್ಯ ಮನೆಮನೆಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪರಿಸರಾಸಕ್ತರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಮಣೂರು ಪರಿಸರದಲ್ಲಿ ಜಾಗೃತಿ ಮೂಡಿಸಿ ಮನೆಗಳಿಗೆ ಗಿಡ ನೀಡಿ ನೆಡಲಾಯಿತು. ಮಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸಿಇಒ ಹರ್ಷ ಪೂಜಾರಿ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಇದ್ದರು. ರವೀಂದ್ರ ಕೋಟ ನಿರ್ವಹಿಸಿ, ಅಜಿತ್ ಆಚಾರ್ ವಂದಿಸಿದರು.
