AgricultureBlogCulturalEconomyEntertainmentFashionGovernmentHighlightsHuman storiesLifestyleLocal newsNatureOthersPoliticsState newsTop StoriesTrending

ಮೀನುಗಾರರ ಹಿತ ಕಾಯುವಂತೆ ಮುಖ್ಯಮಂತ್ರಿಗಳಿಗೆ ಅಶೋಕ ಪೂಜಾರಿ ಬೀಜಾಡಿ‌ ನೇತೃತ್ವದ ನಿಯೋಗ ಮನವಿ

Aware others:

ಕುಂದಾಪುರ: ಕರಾವಳಿ ತೀರದ ಮೀನುಗಾರರ ಹಿತ ಕಾಯುವಂತೆ‌ ಮತ್ತು ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗ,  ಕರಾವಳಿ ತೀರದ ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಲವು ವಿಶೇಷ ಪ್ರಮುಖ ಬೇಡಿಕೆಗಳು ಹಾಗೂ ಮೀನುಗಾರರ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮೀನುಗಾರರ ಮನೆ ನಿರ್ಮಾಣದ ಸಹಾಯಧನ “ಮತ್ಸ್ಯಾಶ್ರಯ ಯೋಜನೆ”ಯನ್ನು ಒಂದು ಲಕ್ಷದ ಇಪ್ಪತ್ತು ಸಾವಿರದಿಂದ ಮೂರು ಲಕ್ಷಕ್ಕೆ ಹೆಚ್ಚಿಸಬೇಕು, ಮಹಿಳಾ ಮೀನುಗಾರರ ಸ್ವಸಹಾಯ ಗುಂಪುಗಳ ಸಾಲಕ್ಕೆ ಸಕಾಲದಲ್ಲಿ ಬಡ್ಡಿ ಸಹಾಯಧನ ಮಂಜೂರು ಮಾಡಬೇಕು, ಆಕಸ್ಮಿಕ ದೋಣಿ ಅಪಘಾತ ತಡೆಯಲು ಅಗತ್ಯ ಜೀವರಕ್ಷಕ ಜಾಕೆಟ್‌ಗಳನ್ನು ಇಲಾಖೆಯಿಂದ ಒದಗಿಸಬೇಕು, ಮೀನುಗಾರಿಕೆಯಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಮೀನುಗಾರರಿಗೆ ತಕ್ಷಣದ ತುರ್ತು ಪರಿಹಾರ ನೀಡಬೇಕು, ಕರಾವಳಿಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತೇಜನ ನೀಡಿ, ಮಿನಿ ಕೈರಂಪಣಿ ಬಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಲಾಗಿದೆ.

ನಿಯೋಗದಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್, ಹಿರಿಯ ಮೀನುಗಾರ ಸಂಘದ ಸದಸ್ಯರಾದ ರಾಮ ಕಾಂಚನ್ ಕೊರವಡಿ, ಯೋಗೀಶ್ ಕುಂದರ್, ರವೀಂದ್ರ ಬೀಜಾಡಿ ಮನೆ ಮತ್ತು ಅಶೋಕ್ ಪೂಜಾರಿ ಚಾತ್ರಬೆಟ್ಟು ಮೊದಲಾದವರು ಇದ್ದರು.

ಶಾಸಕರು ಹಾಗೂ ಸಂಸದರು ಮಾಡಬೇಕಾದ ಜವಾಬ್ದಾರಿಯುತ ಕೆಲಸವನ್ನು, ಜನಸಾಮಾನ್ಯರ ಧ್ವನಿಯಾಗಿ, ಒಬ್ಬ ಜಾಗೃತ ಜನನಾಯಕರಾಗಿ ಅಶೋಕ್ ಪೂಜಾರಿ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದಿರುವ ಮೀನುಗಾರ ಮುಖಂಡರು, ಮೀನುಗಾರರ ಕಷ್ಟಗಳಿಗೆ ಸ್ಪಂದಿಸಿ, ಸರ್ಕಾರ ಮಟ್ಟದಲ್ಲಿ ಜನರ ಧ್ವನಿ ತಲುಪಿಸಲು ಶ್ರಮಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!