BlogEconomyEducationElectionEntertainmentFashionGovernmentHighlightsHuman storiesLifestyleLocal newsOthersPoliticsState newsTop StoriesTrending

ಪಂಚ ಗ್ಯಾರೆಂಟಿಗಳ ಬಗ್ಗೆ ಗೊಂದಲ ಬೇಡ : ಅಶೋಕ ಪೂಜಾರಿ ಬೀಜಾಡಿ

Aware others:

ಕುಂದಾಪುರ: ಚುನಾವಣಾ ಪೂರ್ವದಲ್ಲಿ‌ ನೀಡಿದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ‌ ಕಾಂಗ್ರೆಸ್ ಪಕ್ಷ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ತಂದಿದೆ. ಮುಖ್ಯಮಂತ್ರಿಗಳು ಬದಲಾದರೂ ಯೋಜನೆ ಬದಲಾಗುವುದಿಲ್ಲ. ಆದುದರಿಂದ ವಿರೋಧ ಪಕ್ಷಗಳು ನಡೆಸುತ್ತಿರುವ ಗೊಂದಲಗಳಿಗೆ ರಾಜ್ಯದ ಜನ ತಲೆಕೆಡಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಮುಖಂಡ, ಬಿಲ್ಲವ ಸಂಘಟನೆಯ ನೇತಾರ ಅಶೋಕ ಪೂಜಾರಿ ಬೀಜಾಡಿ ಹೇಳಿದ್ದಾರೆ.

ಅಶೋಕ ಪೂಜಾರಿ ಬೀಜಾಡಿ,  ಕಾಂಗ್ರೆಸ್ ಮುಖಂಡ

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ.

ಇದು ಜನಪರ ಸರ್ಕಾರದ ಗಟ್ಟಿ ನಿರ್ಧಾರ ಎಂದಿರುವ ಅಶೋಕ ಪೂಜಾರಿ, ನಮ್ಮ ಪಂಚ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಕಾಂಗ್ರೆಸ್ ಸರ್ಕಾರ ಇರುವಷ್ಟೂ ದಿನ ಮುಂದುವರೆಯುತ್ತದೆ ಎಂದರು.

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರ, ಶೋಷಿತರ ಹಿತರಕ್ಷಣೆಯನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!