ಹದಿಹರೆಯದಲ್ಲಿ ಲೈಂಗಿಕ ಶಿಕ್ಷಣ ಜ್ಯಾರಿಗೆ ತರುವಂತೆ ನಾಗೇಂದ್ರ ಪುತ್ರನ್ ಆಗ್ರಹ
ಕೋಟ: ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರ ಪ್ರಕರಣಗಳು, ಅಪ್ರಾಪ್ತ ಮಕ್ಕಳು ಹಾಗೂ ಮಹಿಳೆಯರ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು ಇದು ನಾಗರಿಕ ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದೆಲ್ಲದಕ್ಕೂ ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಜ್ಯಾರಿಗೆ ತರಬೇಕು ಎಂದು ಕೋಟ ನಾಗೇಂದ್ರ ಪುತ್ರನ್ ಅವರು ಆಗ್ರಹಿಸಿದ್ದಾರೆ.

ತಮಿಳುನಾಡಿನಲ್ಲಿ ನಡೆದ 10 ವರ್ಷದ ಮಗುವಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ನಾಗರಿಲ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮಲ್ಪೆಯಲ್ಲಿ ಅಪ್ರಾಪ್ತೆ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದಲ್ಲದೇ ಬೆದರಿಸಿ ಚಿನ್ನಾಭರಣ ದೋಚಿರುವುದು ನಮ್ಮ ಕಣ್ಮುಂದೆ ನಡೆದ ಆಘಾತಕಾರ ಸಂಗತಿಯಾಗಿದೆ ಎಂದಿರುವ ಅವರು, ಲೈಂಗಿಕ ಶಿಕಗಷಣ ನೀಡಿದಾಗಲಷ್ಟೇ ಈ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದಿದ್ದಾರೆ.
ಹದಿಹರೆಯದ ಯುವಕ ಯುವತಿಯರಿಗೆ ಪ್ರತ್ಯೇಕ ಲೈಂಗಿಕ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಲೈಂಗಕತೆಯ ಸಾಧಕ ಬಾಧಕಗಳ ಅರಿವು ಪ್ರೌಢಾವಸ್ಥೆಯಲ್ಲಿ ಅರಿವಾದರೆ ತನ್ನನ್ನು ತಾನು ರಲ್ಷಿಸಿಕೊಳ್ಳಲು ಸಾಧ್ಉ ಎಂದು ಅವರು ಹೇಳಿದ್ದಾರೆ.
ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳನ್ನು ಹೆರುವುದು, ಪುಸ್ತಕ ಹಿಡಿಯಬೇಕಾದ ಕೈಗಳು ಪುಟ್ಟ ಕಂದಮ್ಮಗಳನ್ನು ಎತ್ತಿಕೊಳ್ಳುವುದು, ಆಮಿಷಗಳಿಗೆ ಬಲಿಯಾಗಿ ಭೋಗದ ವಸ್ತುವಾಗುವುದು, ಅತ್ಯಾಚಾರದ ಬಳಿಕ ಕೊಲೆ.. ಹೀಗೇ ಎಲ್ಲದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಸೂಕ್ತ ಲೈಂಗಿಕ ಶಿಕ್ಷಣವೊಂದೇ ಪರಿಹಾರವಾಗಿದ್ದು ಸರ್ಕಾರಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು ಎಂದವರು ಹೇಳಿದ್ದಾರೆ.
