ಕೋಟ ಪಡುಕೆರೆ- ಯಕ್ಷಗಾನ ಕಲಾವಿದರಿಗೆ ಸನ್ಮಾನ
ಕೋಟ-ಪಡುಕೆರೆ: ಇಲ್ಲಿನ ಉದ್ಭವಲಿಂಗೇಶ್ವರ ಭಜನಾ ಮಂದಿರದಲ್ಲಿ ನಲವತ್ತನೇ ವಾರ್ಷಿಕ ಭಜನಾ ಮಂಗಲೋತ್ಸವದ ಪ್ರಯುಕ್ತ 3ದಿನಗಳ ಕಾಲ ಭಜನೆ ಮತ್ತು ಯಕ್ಷಗಾನ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ಯಕ್ಷಗಾನ ಕಲಾವಿದರಾದ ಉದಯ ನಾಯ್ಕ್ ಪಡುಕರೆ ಹಾಗೂ ವಿಶ್ವನಾಥ ಆಚಾರ್ಯ ತೊಂಬಟ್ಟು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ ನ ಪ್ರವರ್ತಕ ಆನಂದ ಸಿ ಕುಂದರ್, ಉದ್ಭವಲಿಂಗೇಶ್ವರ ಭಜನಾ ಮಂದಿರದ ಅಧ್ಯಕ್ಷ ನವೀನ ಕುಮಾರ, ಗೌರವ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಹರೀಶ ಕುಮಾರ್ ಪಡುಕರೆ, ಜಯರಾಮ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಗತಿಪರ ಕೃಷಿಕರು,ಉದ್ಭವಲಿಂಗೇಶ್ವರ ಭಜನಾ ಮಂದಿರ ಕಾರ್ಯದರ್ಶಿ ಪ್ರಮೋದ ಪಡುಕರೆ, ವಿಜಯ ಕುಮಾರ್ ,ವಿನಯ ಕುಮಾರ ಹಾಗೂ ಉದ್ಬಲಿಂಗೇಶ್ವರ ಭಜನಾ ಮಂದಿರದ ಸದಸ್ಯರು ಉಪಸ್ಥಿತರಿದ್ದರು.
