ಹಂಗಾರಕಟ್ಟೆ: ದ್ವಿಭಾಷಾ ಮಾಧ್ಯಮ ಉದ್ಘಾಟನೆ ಹಾಗೂ ಚಿಣ್ಣರ ಯಕ್ಷಗಾನ ಪ್ರದರ್ಶನ
ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ದ್ವಿ-ಭಾಷಾ ಮಾಧ್ಯಮ ಉದ್ಘಾಟನೆ ಹಾಗೂ ಚಿಣ್ಣರ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.

ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ರೇಖಾ ಉಡುಪ ಅಧ್ಯಕ್ಷತೆಯಲ್ಲಿ ಶಾಲೆಯ ವಿವಿಧ ಚಟುವಟಿಗೆ ಪ್ರೋತ್ಸಾಹಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.
ಹಂಗಾರಕಟ್ಟೆ ವಾಟರ್ ವೇಸ್ ಶಿಪಯಾರ್ಡ್ ಜನರಲ್ ಮ್ಯಾನೇಜರ್ ಪ್ರಕಾಶ್ ಬಿ ಗಣಾಚಾರಿ , ಬ್ರಹ್ಮಾವರ ವಲಯ ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ನ್ಯಾಯವಾದಿ ಎ.ಪಿ.ಐತಾಳ್ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಬ್ರಹ್ಮಾವರ ವಲಯ ಸಮನ್ವಯಾಧಿಕಾರಿ ಸುರೇಶ್ ಕುಂದರ್, ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣಿತ ಶೆಟ್ಟಿ, ಸಿ ಆರ್ ಪಿ ಹಂಗಾರಕಟ್ಟೆ ಮಾಲಿನಿ ಎಂ.ಪಿ, ಶಾಲಾ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ ನಿರ್ವಹಿಸಿದರು. ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಶಿಕ್ಷಕಿ ವೀಣಾ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕಿಯರಾದ ಪ್ರೀತಿ ವಂದಿಸಿದರು. ವಿದ್ಯಾಶ್ರೀ ಎಮ್.ಬಿ ಯಶೋಧ, ರಮ್ಯಾ, ಲವೀನಾ ಸಹಕರಿಸಿದರು.
