ಕುಂದಾಪುರ: ತಾಲೂಕು ಸರಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶೇಖರ ಪೂಜಾರಿ ಮೂಡಲಮನೆ ಆಯ್ಕೆ
ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ಕುಂದಾಪುರ ತಾಲೂಕು ಸರ್ಕಾರೀ ನೌಕರರ ಸಂಘದ ಕಾರ್ಯದರ್ಶಿ, ಬಸ್ರೂರು ಸರ್ಕಾರೀ ಪ್ರೌಢ ಶಾಲೆಯ ಶಿಕ್ಷಕ ಶೇಖರ ಪೂಜಾರಿ ಮೂಡಲಮನೆ ಆಯ್ಕೆಯಾಗಿದ್ದಾರೆ.

ಎಪ್ರಿಲ್ 7ರಂದು ಕುಂದಾಪುರದಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಕಾರ್ಯದರ್ಶಿಯಾಗಿ ಕಂಡ್ಲೂರು ರಾಮ್ ಸನ್ ಪ್ರೌಢಶಾಲೆಯ ಅಜಯ್ ಕುಮಾರ್, ಖಜಾಂಚಿಯಾಗಿ ಬಸ್ರೂರು ಸರಕಾರಿ ಪ್ರೌಢ ಶಾಲೆಯ ಪಿಯುಸ್ ಡಿ’ಸೋಜಾ, ಉಪಾಧ್ಯಕ್ಷರಾಗಿ ಕಂಡ್ಲೂರು ರಾಮ್ ಸನ್ ಪ್ರೌಢಶಾಲೆಯ ಸಂತೋಷ ಆಯ್ಕೆಯಾದರು. ಸರಕಾರಿ ಪ್ರೌಢಶಾಲೆ ಕಾಳವಾರದ ಹೇಮಾ ಜೊತೆ ಕಾರ್ಯದರ್ಶಿ, ನಾಮ ನಿರ್ದೇಶಕ ಸದಸ್ಯರಾಗಿ ಕೆಪಿಎಸ್ ಕೋಟೇಶ್ವರ ಅನುರಾಧ,. ನಿವೇದಿತ ಪ್ರೌಢಶಾಲೆ ಬಸ್ರೂರು ಇಲ್ಲಿನ ಪ್ರದೀಪ್ ಕುಮಾರ್ ಶೆಟ್ಟಿ, ಸಂಜಯ ಗಾಂಧಿ ಪ್ರೌಢಶಾಲೆ ಅಂಪಾರು ಇಲ್ಲಿನ ಉದಯ ಕುಮಾರ್ ಆಯ್ಕೆಯಾದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಉದಯ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಎಲ್ಲಾ ನಿರ್ದೇಶಕರು ಒಗ್ಗಟ್ಟಿನಿಂದ ಸಂಘವನ್ನ ಬೆಳೆಸಿಕೊಂಡು ಸಂಘವನ್ನು ಮುನ್ನಡೆಸುವಂತೆ ಹೇಳಿ ಶುಭ ಹಾರೈಸಿದರು.
ಸಂಘದ ನೂತನ ಅಧ್ಯಕ್ಷ ಶೇಖರ ಪೂಜಾರಿ ಮಾತನಾಡಿ, ಸಹಶಿಕ್ಷಕರು ಸಂಘಟಿತರಾದಾಗ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯ ಈ ನಿಟ್ಟಿನಲ್ಲಿ ಸಂಘದ ಎಲ್ಲಾ ನಿರ್ದೇಶಕರು, ಶಿಕ್ಷಕರು ಸಹಕರಿಸಬೇಕು. ತನ್ನ ಅವಧಿಯಲ್ಲಿ ಸಂಘ ಹಾಗೂ ಎಲ್ಲಾ ಸದಸ್ಯರ ಸಮಸ್ಯೆಗಳಿಗೆ ಪ್ರಾಮಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯದರ್ಶಿ ಅಜಯ್ ಕುಮಾರ್ ಸ್ವಾಗತಿಸಿ, ವಂದಿಸಿದರು.
