BlogCulturalEconomyEntertainmentFashionHighlightsHuman storiesLifestyleLocal newsOthersReligionTop StoriesTrending

ಅದಿಅಂತ್ಯಗಳಿಲ್ಲದ ಶ್ರೇಷ್ಟ ಧರ್ಮವೇ ಸನಾತನ ಧರ್ಮ – ವಿದ್ವಾನ್ ವಾಸುದೇವ ಜೋಯಿಸ ಹಾಲಾಡಿ

Aware others:

ಶ್ರೀಕ್ಷೇತ್ರ ಮಂಡಾಡಿಯಲ್ಲಿ ಅಷ್ಟಬಂಧ ಪುನರ್ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ಉದ್ಘಾಟನೆ

ಕುಂದಾಪುರ:  ಶ್ರೀ ಕ್ಷೇತ್ರ ಮಂಡಾಡಿಯ ವನದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ಮಂಡಾಡಿಯ ಅಸ್ಮಿತೆ ಮತ್ತೆ ಜಾಗೃತಗೊಂಡಿದೆ. ಆದಿ ಅಂತ್ಯಗಳಿಲ್ಲದ ಧರ್ಮ ಹಾಗೂ ದೇವರುಗಳಿರುವ ಸನಾತನ ಧರ್ಮದಲ್ಲಿ ಧಾರ್ಮಿಕ ವಿಧಿ-ವಿಧಾನಗಳಿಗೆ ದೇವರು ಮನಸ್ಸು ಮಾಡಬೇಕು. ಆಗ ಮಾತ್ರ ಜೀರ್ಣೋದ್ದಾರ ಕಾರ್ಯ ಸಾಧ್ಯ ಎಂದು ಶೃಂಗೇರಿ ಆಸ್ಥಾನ ವಿದ್ವಾನ, ಹಾಲಾಡಿ ಪಂಚಾಂಗಕರ್ತರಾದ ಜ್ಯೋತಿಷಿ ಹಾಲಾಡಿ ವಾಸುದೇವ ಜೋಯಿಸರು ಹೇಳಿದರು.

ಅವರು ಗುರುವಾರ ಸಂಜೆ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ನಂದಿಕೇಶ್ವರ, ಚಿಕ್ಕು ಸಪರಿವಾರ ದೈವಸ್ಥಾನ ಮಂಡಾಡಿ ಇದರ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಂಜೆಯ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದಾನಿಗಳನ್ನು ಸಮ್ಮಾನಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಭೂಲೋಕದ ಸ್ವರ್ಗ. ನಾವೆಲ್ಲರೂ ನಮ್ಮ ಜೀವನ ಸಾರ್ಥಕ್ಯಕ್ಕಾಗಿ ಶಾಲೆ ಹಾಗೂ ದೇವಸ್ಥಾನಗಳಿಗೆ ದಾನಗಳನ್ನು ಮಾಡಬೇಕು ಎಂದರು.

ಇದೆ ಸಂದರ್ಭ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಗುತ್ತಿಗೆದಾರ ಉದ್ಯಮಿ ರಾಜೇಶ್ ಕಾರಂತ, 15 ಲಕ್ಷ ಮೌಲ್ಯದ ಸ್ವಾಗತ ಗೋಪುರ ನಿರ್ಮಿಸಿಕೊಟ್ಟ ಭಾರತೀಶೆಟ್ಟಿ ಮೂಡುಗೋಪಾಡಿ ಹಾಗೂ ಶಂಕರಶೆಟ್ಟಿ ಭಟ್ರಮಕ್ಕಿ, ಕೋಟದ ಗೀತಾನಂದ ಫೌಂಡೇಶನ್ ಚೇರ್ಮೆನ್ ಆನಂದ ಸಿ. ಕುಂದರ್, ಸುಜ್ಞಾನ ಎಜ್ಯುಕೇಷನಲ್ ಟ್ರಸ್ಟ್ ನ ಡಾ. ರಮೇಶ್ ಶೆಟ್ಟಿ ಹಾಗೂ ಭರತ್ ಶೆಟ್ಟಿ ಅವರ ಸಹಿತ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೈಜೋಡಿಸಿದ ಮಹಾದಾನಿಗಳನ್ನು ಹಾಗೂ ದೇವತಾ ಕಾರ್ಯದಲ್ಲಿ ಶ್ರಮಿಸಿದವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿರುವ ಡಾ. ರಂಜನ್ ಆ‌ರ್. ಶೆಟ್ಟಿ, ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ಎಮ್.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆಇದರ ಪ್ರವರ್ತಕ ಕೃಷ್ಣಮೂರ್ತಿ ಮಂಜ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಮೊಳಹಳ್ಳಿ ಇದರ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೆಎಂಎಫ್ ಮಂಗಳೂರು ಇದರ ನಿರ್ದೇಶಕ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಂಕರ ಕೊಠಾರಿ ಉಳ್ಳೂರು ಉದ್ಯಮಿಗಳು, ಮುಂಬಯಿ, ಜಗನ್ನಾಥ ಶೆಟ್ಟಿ ಹೊಂಬಾಡಿ ಮೇಲ್ಮನೆ, ಪ್ರಕಾಶ್‌ ಶೆಟ್ಟಿ ಹೇರಾಡಿ ಅಧ್ಯಕ್ಷರು, ಗ್ರಾಮಪಂಚಾಯತ್ ಯಡ್ತಾಡಿ, ಕರುಣಾಕರ ಕೊಠಾರಿ ಇಂಜಿನಿಯರ್, ಯು.ಎಸ್.ಎ., ಉಮೇಶ ಬಳೆಗಾರ ಪಾತ್ರಿಗಳು, ವನದುರ್ಗಾಪರಮೇಶ್ವರಿ ದೇವಸ್ಥಾನ, ಮಂಡಾಡಿ, ಶಂಕರಶೆಟ್ಟಿ ಭಟ್ರಮಕ್ಕಿ, ರಾಜೀವ ಶೆಟ್ಟಿ ಉದ್ಯಮಿಗಳು, ಗದಗ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ , ಮುಂಬೈಯ ಮಲ್ವಾನ್ ತಡ್ಕಾ ಸಂಸ್ಥೆಯ ಚೇರ್ಮೆನ್, ಹೊಟೇಲ್ ಉದ್ಯಮಿ ಆದರ್ಶ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಪ್ರಾಸ್ತಾವಿಸಿದರು. ಸ್ಥಳೀಯ ಪುಟಾಣಿಗಳು ಪ್ರಾರ್ಥಿಸಿದರು. ಪ್ರಣೂತ್ ಗಾಣಿಗ ನಿರೂಪಿಸಿದರು. ಮಾಜೀ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಶೆಟ್ಟಿ ಹುಣ್ಸೆಮಕ್ಕಿ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ರಾಘವೇಂದ್ರ ಜನ್ಸಾಲೆ ಮತ್ತು ಬಳಗದಿಂದ ಶ್ರೀ ಕ್ಷೇತ್ರ ಮಂಡಾಡಿ ಯಕ್ಷಗಾನ ಪ್ರಸಂಗ ನಡೆಯಿತು. ಬಳಿಕ ಮನು ಹಂದಾಡಿಯವರಿಂದ ನಗೆ ಒಡ್ಡೋಲಗ ಬಳಿಕ ಮಂಗಳೂರಿನ‌ ನಂದಗೋಕುಲ ಕಲಾ ತಂಡದಿಂದ ಶ್ರೀದೇವಿ ವೈಭವಂ ನೃತ್ಯರೂಪಕ ಕಾರ್ಯಕ್ರಮ ನಡೆಯಿತು.


Aware others:

Leave a Reply

Your email address will not be published. Required fields are marked *

error: Content is protected !!