ಕಟ್ಟಕಡೆಯ ವ್ಯಕ್ತಿಯೂ ಗ್ರಾಮೋತ್ಸವದಲ್ಲಿ ಭಾಗವಹಿಸಿದಾಗ ಗ್ರಾಮೋತ್ಸವ ಸಾರ್ಥಕ : ಕಟ್ ಬೆಲ್ತೂರು ಗ್ರಾಮೋತ್ಸವ ಉದ್ಘಾಟಿಸಿದ ಬೋಳ ಕೊರಗ
ಹೆಮ್ಮಾಡಿ: ಉತ್ಸವಗಳು ಕೇವಲ ಹಬ್ಬವಾಗದೇ ಜನಾಭಿವೃದ್ಧಿಯತ್ತ ಮುಖ ಮಾಡಿದಾಗ ಸಾರ್ಥಕ್ಯ ಸಾಧ್ಯ. ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪರಿಕಲ್ಪನೆ ಯ ಬೈಂದೂರು ಉತ್ಸವ 2026 ಪ್ರಯುಕ್ತ ಕಟ್ ಬೆಲ್ತೂರು ಮತ್ತು ದೇವಲ್ಕುಂದ ಗ್ರಾಮಗಳು ಹಾಗೂ ಸರ್ಕಾರಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಗ್ರಾಮೋತ್ಸವ ಯಶಸ್ಸು ಕಂಡಿದೆ ಎಂದು ಕೊರಗ ಸಮುದಾಯದ ಹಿರಿಯರಾದ ಬೋಳ ಕೊರಗ ಹೇಳಿದ್ದಾರೆ.

ಅವರು ಆದಿತ್ಯವಾರ ಗ್ರಾಮ ಪಂಚಾಯತ್ ಕಟ್ ಬೆಲ್ತೂರು ವಠಾರದಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪರಿಕಲ್ಪನೆ ಯ ಬೈಂದೂರು ಉತ್ಸವ 2026 ಅಂಗವಾಗಿ ನಡೆದ ಗ್ರಾಮೋತ್ಸವವನ್ನು ಉದ್ಘಾಟಿಸಿದರು. ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವೈಶಾಲಿ ಗ್ರಾಮೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಕೆ ಶೆಟ್ಟಿ, ಸದಸ್ಯರಾದ ವಿಮಲ, ಶ್ವೇತಾ ದೇವಾಡಿಗ, ಶಾಲಿನಿ ಶೆಟ್ಟಿ, ಅಶೋಕ್ ಬಳೆಗಾರ್, ಶರತ್ ಕುಮಾರ್ ಶೆಟ್ಟಿ, ಜ್ಯೋತಿ, ಸವಿತಾ ರಾಘವೇಂದ್ರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನುಸೂಯ ಆಚಾರ್ ಉಪಸ್ಥಿತರಿದ್ದರು. ಬೈಂದೂರು ಉತ್ಸವ ಸಮಿತಿ ಉಪಾಧ್ಯಕ್ಷೆ ಅನಿತಾ ಆರ್. ಕೆ ಮರವಂತೆ, ಸಮಿತಿ ಸಂಚಾಲಕ ಶ್ರೀ ಗಣೇಶ್ ಗಾಣಿಗ ಉಪ್ಪುಂದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು. ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಸ್ವಾಗತಿಸಿದರು. ಹೆಮ್ಮಾಡಿ ಜನತಾ ಪ್ರೌಢಶಾಲಾ ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಿಸಿದರು. ಕಟ್ ಬೆಲ್ತೂರು ಗ್ರಾಮೋತ್ಸವ ಸಂಚಾಲಕ ಸದಾಶಿವ ಶೆಟ್ಟಿ ವಂದಿಸಿದರು.
