ರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗುರುದಾಸ್ ಜಿ ಪ್ರಥಮ, ವರ್ಲ್ಡ್ ಯೋಗಾಸನ ಕ್ರೀಡಾಕೂಟಕ್ಕೆ ಆಯ್ಕೆ

ಕುಂದಾಪುರ: ಇತ್ತೀಚೆಗೆ ಯೋಗಾಸನ ಭಾರತ್ (Regn by ministry of youth affairs & sports. Government of India,Indian Olympics Association) ವತಿಯಿಂದ ಮಹಾರಾಷ್ಟ್ರದ ಸಂಗಮ್ ನರ್ ಎಂಬಲ್ಲಿ ನಡೆದ 6 ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಹೆಡ್ಕಾನ್ಸ್ಟೇಬಲ್ ಗುರುದಾಸ್ ಜಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕೆ ಗೆದ್ದಿದ್ದಾರೆ.

ಆ ಮೂಲಕ ಭಾರತ ತಂಡದಲ್ಲಿ ವರ್ಲ್ಡ್ ಯೋಗಾಸನ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬೈಂದೂರು ತಾಲೂಕಿನ ತೆಗ್ಗರ್ಸೆ ಗ್ರಾಮದ ನಿವಾಸಿ. ಇದುವರೆಗೆ ರಾಜ್ಯ ಮತ್ತು ಅಂತರ್ರಾಜ್ಯ ಮಟ್ಟದ ಹಲವಾರು ಸ್ಪರ್ಧೇಗಳಲ್ಲಿ ಭಾಗವಹಿಸಿ ಹಲವಾರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.




ಕರ್ನಾಟಕ ಪೊಲೀಸ್ ಇಲಾಖೆ ಯ ಮೊದಲ ಪೊಲೀಸ್ ಎನ್ನುವ ಹೆಗ್ಗಳಿಕೆಗೆ ಗುರುದಾಸ್ ಜಿ ಪಾತ್ರರಾಗಿದ್ದು, ಉಡುಪಿ ಜಿಲ್ಲಾಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ, ವೃತ್ತನಿರೀಕ್ಷಕ ಜಯರಾಮ ಡಿ ಗೌಡ ಅಭಿನಂದಿಸಿದರು.
