BlogCulturalEconomyEducationEntertainmentFashionGovernmentHighlightsHuman storiesLifestyleLocal newsOthersState newsSuccess storiesTop StoriesTrending

ಮಣಿಪಾಲ: ಜನನಾಯಕ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಮಣಿಪಾಲದ ಮಾಹೇ ಹೊಸ ವರ್ಷದ ಪ್ರಶಸ್ತಿ – ಇಂದು ಪ್ರದಾನ

Aware others:

ಕುಂದಾಪುರ: ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯು ಕೇಶನ್, ಮಾಹೆ, ಮಣಿಪಾಲ ಎಜ್ಯುಕೇಶನ್ ಆಂಡ್ ಮೆಡಿಕಲ್ ಗ್ರೂಪ್, ಮಣಿಪಾಲ ಮೀಡಿಯಾ ನೆಟ್ವರ್ಕ್ ಹಾಗೂ ಡಾ.ಟಿ.ಎಂ.ಎ.ಪೈ ಫೌಂಡೇಶನ್ ಸಂಯುಕ್ತವಾಗಿ ನೀಡುವ 2026ನೇ ಸಾಲಿನ ‘ಹೊಸ ವರ್ಷದ ಪ್ರಶಸ್ತಿ’ ಯನ್ನು ಮಾಜಿ ಸಚಿವ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ, ಜನಪರ ಚಿಂತಕ ಹಾಗೂ ಸಮಾಜವಾದಿ ನಾಯಕ ಕೆ. ಜಯಪ್ರಕಾಶ್ ಹೆಗ್ಡೆಯವರ ಸಹಿತ ಐವರಿಗೆ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜೀ ಅಧ್ಯಕ್ಷರಾಗಿ, ಕರ್ನಾಟಕದ ಮಾಜೀ ಸಚಿವರಾಗಿ, ಮಾಜೀ ಸಂಸದರಾಗಿ ಸೇವೆ ಸಲ್ಲಿಸಿರುವ ಕೆ. ಜಯಪ್ರಕಾಶ್ ಹೆಗ್ಡೆ, ಯುಎಇಯ ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ಖ್ಯಾತ ಬಹುಭಾಷಾ ಚಲನಚಿತ್ರ ನಟಿ ವಿನಯ ಪ್ರಸಾದ್, ಕೆನರಾ ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಲಕ್ಷ್ಮೀನಾರಾಯಣ ಹಾಗೂ ಮಣಿಪಾಲ ಅಕಾಡಮಿ ಆಫ್ ಹೈಯ‌ರ್ ಎಜ್ಯುಕೇಶನ್‌ನ ಕುಲಪತಿ ಲೆ.ಜ.(ಡಾ.) ಎಂ.ಡಿ. ವೆಂಕಟೇಶ್ ಈ ಬಾರಿಯ ಹೊಸ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜ.10ರಂದು ಸಂಜೆ 5.30ಕ್ಕೆ “ಮಣಿಪಾಲದ ಫಾರ್ಚೂನ್ ವ್ಯಾಲಿವ್ಯೂ”ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Aware others:

Leave a Reply

Your email address will not be published. Required fields are marked *

error: Content is protected !!