ಕೋಟ: ಇಂದು ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಗೆಂಡಸೇವೆ

ಕೋಟ: ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಜನವರಿ 9ರಿಂದ 11ರ ವರೆಗೆ ಪ್ರತೀ ವರ್ಷದಂತೆ ನಡೆಯುವ ಹಾಲು ಹಬ್ಬ, ಗೆಂಡಸೇವೆ, ಢಕ್ಕೆ ಬಲಿ ಮತ್ತು ತುಲಾಭಾರ ಸೇವಾ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ಸರ್ವಭಕ್ತರನ್ನೂ ಪ್ರೀತಿಯಿಂದ ಆಮಂತ್ರಿಸಿದ್ದಾರೆ.











ಸುದ್ಧಿಗಾರರೊಂದಿಗೆ ಮಾತನಾಡಿರುವ ಅವರು, ಇಂದು ಸಂಜೆ ಏಳು ಗಂಟೆಯಿಂದ ವಿಶೇಷ ಗೆಂಡಸೇವೆ ಕಾರ್ಯಕ್ರಮ ನಡೆಯಲಿದ್ದು ಸುಮಾರು ಎರಡಿಂದ ಮೂರು ಸಾವಿರ ಭಕ್ತರು ಗೆಂಡಸೇವೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಸುಮಾರು ಎಂಟು ಸಾವಿರ ಭಕ್ತರಿಗೆ ರಾತ್ರಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.











ಭಾನುವಾರ ಬೆಳಿಗ್ಗೆ ತುಲಾಭಾರ ಸೇವೆ ನಡೆಯಲಿದ್ದು ಸುಮಾರು ಐನೂರು ಭಕ್ತರು ಈಗಾಗಲೇ ತುಲಾಭಾರ ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ವರ್ಷದಿಂದ ವರ್ಷಕ್ಕೆ ದೇವಿಯ ಅಲಂಕಾರ ಹೆಚ್ಚುತ್ತಾ ಬರುತ್ತಿದ್ದು, ಪ್ರತೀ ವರ್ಷವೂ ಭಕ್ತರೇ ದೇವಸ್ಥಾನದ ಸಿಂಗರಿಸುವ ಫಲಪುಷ್ಪಗಳನ್ನು ಪೂರೈಸುತ್ತಿದ್ದು, ಪ್ರತೀ ವರ್ಷ ಪ್ರದಾನ ಅರ್ಚಕ ಸುಬ್ರಾಯ ಜೋಗಿಯವರ ಪುತ್ರ ದೀಕ್ಷಿತ್ ಜೋಗಿ ಅವರ ಸಾರಥ್ಯದಲ್ಲಿ ದೇವಸ್ಥಾನ ಸಿಂಗಾರಗೊಳ್ಳುತ್ತಿದೆ. ಈ ವರ್ಷ ಸುಮಾರು ಎಂಟು ಲಕ್ಷ ರೂಪಾಯಿಗಳ ಫಲಪುಷ್ಪಗಳಿಂದ ತಾಯಿ ಅಮೃತೇಶ್ವರಿ ದೇವಸ್ಥಾನ ಶೃಂಗಾರಗೊಂಡಿದೆ ಎಂದರು.









ಈ ಸಂದರ್ಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಹಿರಿಯ ಅರ್ಚಕ ಕೆ. ಸುಬ್ರಾಯ ಜೋಗಿ, ವಕೀಲ ಗಣೇಶ ಕೆ ನೆಲ್ಲಿಬೆಟ್ಟು, ಉದ್ಯಮಿ ಸುಭಾಶ್ ಶೆಟ್ಟಿ ಗಿಳಿಯಾರು, ಜ್ಯೋತಿ ದೇವದಾಸ್ ಕಾಂಚನ್, ಸುಧಾ ಎ. ಪೂಜಾರಿ, ರತನ್ ಐತಾಳ್, ಶಿವ ಪೂಜಾರಿ, ಚಂದ್ರಶೇಖರ್ ಆಚಾರ್ಯ ಉಪಸ್ಥಿತರಿದ್ದರು.
ವಿಡಿಯೋ ನೋಡಲು ಕೆಳಗೆ ಕ್ಲಿಕ್ಕಿಸಿ
