ತ್ರೋಬಾಲ್: ಸಂಸದ್ ಕ್ರೀಡೋತ್ಸವದಲ್ಲಿ ಪ್ರವೀಣ್ ಫ್ರೆಂಡ್ಸ್ ಪ್ರಥಮ

ಕುಂದಾಪುರ: ಡಿಸೆಂಬರ್ 25ರಂದು ಹೆಮ್ಮಾಡಿಯ ಜನತಾ ಪ್ರೌಢಶಾಲೆಯ ಆವರಣದಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಂಸದ್ ಕ್ರೀಡಾ ಮಹೋತ್ಸವ ಹಾಗೂ ಅಟಲ್ ಜನ್ಮ ಶತಾಬ್ದಿ ಪ್ರಯುಕ್ತ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರವೀಣ್ ಫ್ರೆಂಡ್ಸ್ ಆಲೂರು ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಜೊತೆ 20,000 ನಗದು ಪುರಸ್ಕಾರವನ್ನು ಪಡೆದುಕೊಂಡಿದೆ.


ದೈಹಿಕ ಶಿಕ್ಷಣ ಶಿಕ್ಷರಾಗಿ ಹೆಸರು ಮಾಡಿದ ಆಲೂರು ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಈ ತಂಡದಲ್ಲಿ ಸಿಂಚನ ದೇವಾಡಿಗ, ಸಾನ್ವಿ, ಸಿಂಚನ ಶೆಟ್ಟಿ, ಸಿಂಚನ ಆರ್ ಶೆಟ್ಟಿ, ನಿಶ್ಮಿತಾ, ಪ್ರೀತಿ, ಲೇಖನಾ. ಸಿ.ಪೂಜಾರಿ, ಸಾಕ್ಷಿ, ರಿತೀಶಾ, ಸನ್ನಿಧಿ ಪಾಲ್ಗೊಂಡಿದ್ದರು. ಒಟ್ಟು 14 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿಜೇತರಿಗೆ ಬಹುಮಾನ ವಿತರಿಸಿದರು.
