ಕುಂದಾಪುರ: ಡಿಸೆಂಬರ್ 27ರಂದು ಹುಬ್ಬುರ್ರಸೂಲ್ ಕ್ರಿಸ್ಟಲ್ ಜುಬಿಲಿ ಬೃಹತ್ ಬುರ್ದಾ ಸಮಾವೇಶ – ರಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದರಿಗೆ ಹುಬ್ಬುರ್ರಸೂಲ್ ಇಮಾಂ ಬೂಸೀರಿ ಅವಾರ್ಡ್
ಕುಂದಾಪುರ: ಸಯ್ಯಿದ್ ಕುಟುಂಬದ ಕಣ್ಮಣಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ರವರ ನೇತೃತ್ವದಲ್ಲಿ ಡಿಸೆಂಬರ್ 27 ಶನಿವಾರ ಕುಂದಾಪುರದ ಐಬಿಟಿ ಗಾರ್ಡನ್ ಮೂಡುಗೋಪಾಡಿಯಲ್ಲಿ ಹುಬ್ಬುರ್ರಸೂಲ್ ಕ್ರಿಸ್ಟಲ್ ಜುಬಿಲಿ ಬೃಹತ್ ಬುರ್ದಾ ಸಮಾವೇಶ ನಡೆಯಲಿದೆ ಎಂದು ಐಬಿಟಿ ಗಾರ್ಡನ್ ಅಧ್ಯಕ್ಷ ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭ ಸಮಸ್ತ ಕೇರಳ ಮುಶಾವರ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಉಸ್ತಾದರಿಗೆ ಈ ವರ್ಷದ ಹುಬ್ಬುರ್ರಸೂಲ್ ಇಮಾಂ ಬೂಸೀರಿ ಅವಾರ್ಡ್ ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬದರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ಕಡಲುಂಡಿ, ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್, ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಅಬ್ದುರ್ರಹ್ಮಾನ್ ವಿಪಿಎ ತಂಙಳ್ ಆಟೀರಿ, ಸಯ್ಯಿದ್ ಶಹೀದುದ್ದೀನ್ ಅಲ್-ಬುಖಾರಿ ಶಿವಮೊಗ್ಗ, ಸಯ್ಯಿದ್ ಅಲವೀ ಅಲ್-ಬುಖಾರಿ ಕರ್ಕಿ, ಸಯ್ಯಿದ್ ಜುನೈದ್ ಅರ್ರಿಫಾಯೀ ತಂಙಳ್ ರಂಗಿನಕೆರೆ, ಅಬ್ದುಲ್ಲಾ ಅಹ್ಸನಿ ಚೆಂಗಾಣಿ, ಡಾ. ಫಾಝಿಲ್ ರಝ್ವೀ ಕಾವಲ್ ಕಟ್ಟೆ ಹಝ್ರತ್, ಡಾ. ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ರಫೀಕ್ ಸಅದಿ ದೇಲಂಪಾಡಿ, ಅಲ್ ಹಾಜ್ ಸಲೀಂ ಮದನಿ ಎಲ್ಲೂರು, ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.

ಬುರ್ದಾ ಹಾಫಿಝ್ ಮುಬಶ್ಶಿರ್ ಅದನಿ ಪೆರಿನ್ಡಾಟಿರಿ ಮತ್ತು ಸಂಘ ಹಾಗೂ ನಅತೇ ಶರೀಫ್ ಝಾಕಿರ್ ಅಹ್ಮದ್ ಕಶ್ಮೀರ್, ರಹೀಸ್ ಅಹ್ಮದ್ ಕಶ್ಮೀರ್ , ಶಿಯಾನ್ ಖಯ್ಯೂಮ್ ಕಶ್ಮೀರ್ ಮೊದಲಾದವರು ಆಲಾಪನೆ ಮಾಡಲಿದ್ದಾರೆ ಎಂದು ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಹೇಳಿದ್ದಾರೆ.
