BlogCulturalEconomyEducationEntertainmentFashionHighlightsHuman storiesLifestyleLocal newsSuccess storiesTop StoriesTrending

ಕುಂದಾಪುರ: ಚದುರಂಗ ಜಗತ್ತಿನ ಉದಯೋನ್ಮುಖ ನಕ್ಷತ್ರ : ಉತ್ಸವ ಬಿ.ಪಿ.

Aware others:

ಕುಂದಾಪುರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಇರಬೇಕು ಎನ್ನುವುದಕ್ಕೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಉತ್ಸವ್. ಬಿ.ಪಿ. ಒಬ್ಬ ಉತ್ತಮ ಊದಾಹರಣೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ 7 ಚದುರಂಗ (ಚೆಸ್) ಸ್ಪರ್ಧೆಗಳಲ್ಲಿ ತನ್ನ ಚತುರತೆಯಿಂದ ಗಮನ ಸೆಳೆದಿದ್ದಾನೆ ಉತ್ಸವ್ ಬಿ.ಪಿ. ಬೇಸಿಗೆ ರಜೆಯನ್ನು ಆಟ-ಮನರಂಜನೆಗೆ ವ್ಯಯಿಸದೇ, ಸದುಪಯೋಗಪಡಿಸಿಕೊಂಡ ಈ ಪ್ರತಿಭಾವಂತ ವಿದ್ಯಾರ್ಥಿ ಮೈಸೂರಿನ ಬಿ.ಎಸ್.ಎಸ್. ಸ್ಕೂಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಎಫ್‌ಐಡಿಇ ರೇಟೆಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಹಾಗೂ ನಗದು ಬಹುಮಾನ ಪಡೆದು ತನ್ನ ಪ್ರತಿಭೆ ಚಾತುರ್ಯವನ್ನು ಜಗತ್ತಿಗೆ ಪರಿಚಯಿಸಿದ್ದಾನೆ.

ಅಷ್ಟೇ ಅಲ್ಲ,  ಮಂಗಳೂರು ಶಾರದಾ ವಿದ್ಯಾಲಯದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಉತ್ಸವ 7ನೇ ಸ್ಥಾನವನ್ನು ಪಡೆದು ನಗದು ಬಹುಮಾನವನ್ನು ಪಡೆದಿದ್ದಾನೆ. ಕೋಣನಕುಂಟೆ, ಬೆಂಗಳೂರು ಇಲ್ಲಿ ಆಯೋಜಿಸಲಾದ ಸ್ಟೇಟ್ ಅಮೆಚ್ಯೂರ್ ಚಾಂಪಿಯನ್‌ಶಿಪ್‌ನಲ್ಲಿ ಟ್ರೋಪಿ ಹಾಗೂ ನಗದು ಬಹುಮಾನವನ್ನು ಗೆದ್ದ ಉತ್ಸವ್ , ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸಿದ್ದಾನೆ. ಮೈಸೂರಿನ ರೋಟರಿ ವೃಂದಾವನ್ ಸ್ಕೂಲ್‌ನಲ್ಲಿ ನಡೆದ ಎಫ್‌ಐಡಿಇ ರೇಟೆಡ್ ಕ್ಲಾಸಿಕಲ್ ಚಾಂಪಿಯನ್‌ಶಿಪ್‌ನಲ್ಲಿ ಸಹ ಟ್ರೋಪಿ ಮತ್ತು ನಗದು ಬಹುಮಾನವನ್ನು ಪಡೆದು ಸಾಧನೆ ಮಾಡಿದ್ದಾನೆ. ಈ ಸಾಧನೆಗಳ ಸರಪಳಿಯ ಮೂಲಕ ಉತ್ಸವ ತನ್ನ ಚದುರಂಗದಾಟದ ಮಟ್ಟವನ್ನು ನಿರಂತರವಾಗಿ ಮೆರೆದಿದ್ದಾನೆ.

ಕುಂದಾಪುರದ ಬಿ.ಪಿ. ಶೇಷಾಚಲ ಮತ್ತು ಸ್ಮಿತಾ ಎಚ್. ದಂಪತಿಗಳ ಪುತ್ರನಾಗಿರುವ ಉತ್ಸವ, ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ಸತತ ಬೆಂಬಲದಿಂದ ಈ ಮಟ್ಟದ ಯಶಸ್ಸು ಕಂಡಿದ್ದಾನೆ. ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಶಾಲೆಗೆ ಹೆಮ್ಮೆ, ಸಮಾಜಕ್ಕೂ ಹೆಮ್ಮೆ ಮತ್ತು ಅದು ರಾಷ್ಟ್ರದ ಹೆಮ್ಮೆ. ಅವಕಾಶಕ್ಕಾಗಿ ಕಾದವರಿಗಿಂತ ಅವಕಾಶವನ್ನು ಸೃಷ್ಟಿಸಿಕೊಳ್ಳುವವರು ಇತಿಹಾಸ ಬರೆಯುತ್ತಾರೆ. ಇದಕ್ಕೆ ಉದಾಹರಣೆ ಉತ್ಸವ. ಇವನು ಕೇವಲ ವಿದ್ಯಾರ್ಥಿಯಲ್ಲ, ವಿಜಯಶೀಲ ಮನೋಭಾವದ ಪ್ರತಿರೂಪ ಎಂದು ಶಾಲೆಯ ಪ್ರಾಂಶುಪಾಲ ಶರಣ ಕುಮಾರ ಹೇಳಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!