ಸಾಲಿಗ್ರಾಮ, ಬ್ರಹ್ಮಾವರ ಹೋಬಳಿ ಮಟ್ಟದ ಕ್ರೀಡಾಕೂಟ ಮುಕುಟ 2025 ಕಾರ್ಯಕ್ರಮ – ಕ್ರೀಡಾಸಕ್ತಿ ಬೆಳೆಸಿಕೊಳ್ಳಿ ಎಂದ ಶಬನಾ ಅಜುಂ
ಕೋಟ: ಯುವ ಸಮುದಾಯ ಹೆಚ್ಚು ಕ್ರೀಡಾಸಕ್ತಿ ಹೊಂದುವ ಮೂಲಕ ಸಾಧನೆಯ ಶಿಖರ ಏರಲು ಸಾಧ್ಯ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ ಹೇಳಿದರು.

ಸೋಮವಾರ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ಇವರ ಸಂಯುಕ್ತ ಆಶ್ರಯದಲ್ಲಿ 14ರ ವಯೋಮಿತಿಯ ಬಾಲಕ – ಬಾಲಕಿಯರ ಬ್ರಹ್ಮಾವರ ಹೋಬಳಿ ಮಟ್ಟದ ಕ್ರೀಡಾಕೂಟ ಮುಕುಟ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮೊಬೈಲ್ ಕಾಲಘಟ್ಟದಲ್ಲಿ ಕ್ರೀಡಾಸಕ್ತಿ ಕುಂಠಿತಗೊಳ್ಳುತ್ತಿದ್ದು ಈ ಬಗ್ಗೆ ಯುವಕರು ಭಾಗಿಯಾಗುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಮುನ್ನುಡಿ ಬರೆಯಲು ಸಾಧ್ಯ, ಕ್ರೀಡೆಯಲ್ಲಿ ಗೆಲುವ ಹುಮ್ಮಸ್ಸಿಗಿಂತ ಭಾಗವಹಿಸುವುದು ಬಹುಮುಖ್ಯ, ಸೋಲು ಗೆಲುವು ಪ್ರತಿ ವ್ಯವಸ್ಥೆಯಲ್ಲಿ ಸಹಜ, ಆದರೆ ಸಮನಾಗಿ ಸ್ವೀಕರಿಸಿ ಮುನ್ನೆಡೆದರೆ ಕ್ರೀಡಾ ಸಾರ್ಥಕ್ಯಕ್ಕೆ ಕೈಗನ್ನಡಿಯಾಗಲಿದೆ ಎಂದರಲ್ಲದೆ ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜಿಸುವುದರ ಮೂಲಕ ಒಂದಿಷ್ಟು ಪ್ರತಿಭೆಗಳು ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಸಭೆಯ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಕೋಟ ಆರಕ್ಷಕ ಠಾಣೆಯ ಎ.ಎಸ್ ಐ ಗೋಪಾಲ ಪೂಜಾರಿ ಕ್ರೀಡಾ ಜ್ಯೋತಿ ಬೆಳಗಿದರು. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಕ್ರೀಡಾ ಧ್ವಜಾರೋಹಣಗೈದರು. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ, ಉದ್ಯಮಿ ಅಜೇಯ್ ಶ್ಯಾನುಭಾಗ್, ಗಣಪತಿ ಶ್ಯಾನುಭಾಗ್, ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಾಧು ಸೇರಿಗಾರ್, ಪಟ್ಟಣಪಂಚಾಯತ್ ಸದಸ್ಯೆ ರತ್ನ ನಾಗರಾಜ್ ಗಾಣಿಗ, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ದಿನೇಶ್ ಕಾರ್ಕಡ, ಸಿಆರ್ ಪಿ ಸವಿತಾ ಆಚಾರ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುರುಳಿಧರ ನಾಯರಿ, ಸದಸ್ಯರಾದ ಕೃಷ್ಣಪ್ರಸಾದ್ ಹೇರ್ಳೆ, ಬ್ರಹ್ಮಾವರ ವಲಯ ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಬಿ.ಬಿ ಉಪಸ್ಥಿತರಿದ್ದರು. ಹಂಗಾರಕಟ್ಟೆ ಶಾಲೆಯ ದೈಹಿಕ ಶಿಕ್ಷಕ ಶ್ರೀಕಾಂತ್ ಸಾವಂತ್ ನಿರೂಪಿಸಿ ಕಾರ್ಕಡ ಶಾಲಾ ಸಹ ಶಿಕ್ಷಕಿ ಬೇಬಿ ವಂದಿಸಿದರು.
