BlogCulturalEconomyEntertainmentFashionHighlightsHuman storiesLifestyleLocal newsOthersReligionState newsTechTop StoriesWomen Care

ಕುಂದಾಪುರ: ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ನೂರು ಗಂಟೆಗಳ ಆಹೋರಾತ್ರಿ ಭಜನೆ

Aware others:

ಕುಂದಾಪುರ: ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಶ್ರೀ ಸತ್ಯಸಾಯೀ ಸೇವಾ ಸಮಿತಿ ವತಿಯಿಂದ ನಿರಂತರ ಆಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ 21 ಜಿಲ್ಲೆಗಳ ಸತ್ಯ ಸಾಯೀ ಸೇವಾ ಸಮಿತಿಯ ಸದಸ್ಯರು, ಭಜನಾ ತಂಡ ಯಾವುದೇ ಪ್ರತಿಫಲಾಕ್ಷೇಯಿಲ್ಲದೇ ಇಲ್ಲಿ ಭಜನಾ ಕಾರ್ಯಕ್ರಮ ನಡೆಸಿ ತೆರಳುತ್ತಿರುವುದು ವಿಶೇಷ.

ಈ ಸಂದರ್ಭ ಮಾತನಾಡಿದ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕ ರಾಕೇಶ್ ರಾವ್ ಮಾತನಾಡಿ, ಶ್ರೀ ಸ್ವಾಮಿಯ ನೂರನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಅದರಲ್ಲಿ ಈ ಭಜನಾಕಾರ್ಯವೂ ಒಂದು. ಬುಧವಾರ ಬೆಳಿಗ್ಗೆ 8 ಗಂಟೆಯಿಂದ 12ನೆ ತಾರೀಕಿನ ಮಧ್ಯಾಹ್ನ 12 ಗಂಟೆಯ ವರೆಗೆ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯುತ್ತದೆ ಎಂದರು. ಪೆಬ್ರುವರಿಯಲ್ಲಿ ಸ್ವಾಮಿಯ ರಥ ಪುಟ್ಟ ಪರ್ತಿಯಿಂದ ಬರಲಿದ್ದು, ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಪಾದುಕೆ ಪೂಜೆ ಮಾಡಲಾಗುತ್ತದೆ ಎಂದರು.

ಮಾಜೀ ಸಂಚಾಲಕ ರಾಮಕೃಷ್ಣ ರವರು ಮಾತನಾಡಿ, ಈ ಹಿಂದೆ ಸಾಯಿಬಾಬಾ ರವರ ಐವತ್ತನೇ ವರ್ಷದ ಸಂಭ್ರಮದಲ್ಲಿ 50 ಗಂಟೆಗಳ ನಿರಂತರ ಭಜನೆ ಹಾಗೂ 90 ವರ್ಷದ ಸಂಭ್ರಮದಲ್ಲಿ 90 ಗಂಟೆಗಳ ಭಜನೆ ನಡೆಸಲಾಗಿತ್ತು. ಈ ಅನುಭವದ ಆಧಾರದಲ್ಲಿ ಈ ವರ್ಷ ನೂರು ಗಂಟೆಗಳ ನಿರಂತರ ಭಜನೆ ನಡೆಸಲಾಗುತ್ತಿದೆ ಎಂದರು.

ಸಾಯಿಮಂದಿರಲ್ಲಿ ನಡೆದ ಭಜನಾ ಕಾರ್ಯಕ್ರಮ ಭಕ್ತಿ, ಭಾವಗಳಿಂದ ತುಂಬಿತ್ತು. ಇಲ್ಲಿ ಜಾತಿ ಮತ, ಬಡತನ ಸಿರಿತನಗಳ ಬೇಧಭಾವವಿಲ್ಲದೇ ಎಲ್ಲಾರೂ ಒಟ್ಟಾಗಿ ಭಜನೆಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿತ್ತು. ಒಟ್ಟಿನಲ್ಲಿ ಧಾರ್ಮಿಕವಾಗಿ ಜಾಗೃತಗೊಳ್ಳುತ್ತಾ ಲೋಕಕಲ್ಯಾಣಕ್ಕಾಗಿ ಸತ್ಯಸಾಯಿ ಸಮಿತಿ ಹಮ್ಮಿಕೊಂಡಿರುವ ಭಜನಾ ಕಾರ್ಯಕ್ರಮ ಆಧ್ಯಾತ್ಮಿಕವಾಗಿ ಗುರುತಿಸಿಕೊಳ್ಳುತ್ತಿದೆ ಎಂದರೆ ತಪ್ಪಾಗದು.


Aware others:

Leave a Reply

Your email address will not be published. Required fields are marked *

error: Content is protected !!