ಕುಂದಾಪುರ: ನವರಾತ್ರಿ ಪ್ರಯುಕ್ತ ಮೊಳಹಳ್ಳಿ ದಿನೇಶ್ ಹೆಗ್ಡೆ ದಂಪತಿಗಳಿಂದ ಟೆಂಪಲ್ ರನ್ – ಖಾರ್ವಿಕೇರಿ ಮಹಾಕಾಳಿ, ಕೋಟ ಅಮೃತೇಶ್ವರಿ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ

ಕುಂದಾಪುರ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಉದ್ಯಮಿ, ದಾನಿಗಳಾದ ಮೊಳಹಳ್ಳಿ ದಿನೇಶ್ ಹೆಗ್ಡೆ ದಂಪತಿಗಳು ದೇವಸ್ಥಾನಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆಯುತ್ತಿದ್ದಾರೆ.

ಶನಿವಾರ ಸಂಜೆ ಕುಂದಾಪುರದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದಿನೇಶ್ ಹೆಗ್ಡೆ ಅವರ ಧರ್ಮಪತ್ನಿ ಜೊತೆಗಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಂತ ಖಾರ್ವಿ, ಉಪಾಧ್ಯಕ್ಷ ಪ್ರಕಾಶ್ ಖಾರ್ವಿ, ಕಾರ್ಯದರ್ಶಿ ನಾಮದೇವ್ ಖಾರ್ವಿ, ಪುರಸಭಾ ಸದಸ್ಯ ಚಂದ್ರಶೇಖರ್ ಖಾರ್ವಿ ಗೌರವಿಸಿ ಸನ್ಮಾನಿಸಿದರು.

ಭಾನುವಾರ ಬೆಳಿಗ್ಗೆ ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ದಿನೇಶ್ ಹೆಗ್ಡೆ ಮತ್ತು ದಂಪತಿಗಳು ತಾಯಿಯ ಆಶೀರ್ವಾದ ಪಡೆದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಪ್ರಧಾನ ಅರ್ಚಕರಾದ ಸುಬ್ರಾಯ ಜೋಗಿ ಅವರು ದಂಪತಿಗಳಿಗೆ ಶಾಲು ಹೊದಿಸಿ ಅಮ್ಮನವರ ಗಂಧ ಪ್ರಸಾದ ನೀಡಿ ಆಶೀರ್ವದಿಸಿದರು.

ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಗಣೇಶ್ ಕೆ ನೆಲ್ಲಿಬೆಟ್ಟು, ಚಂದ್ರ ಆಚಾರ್, ಶಿವ ಪೂಜಾರಿ, ಸುಭಾಸ್ ಶೆಟ್ಟಿ ಗಿಳಿಯಾರ್, ರತನ್ ಐತಾಳ್ ಕೋಟ, ಸುಧಾ ಎ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳಾದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ -ಸಕ್ರಮ ಸದಸ್ಯರಾದ ರಾಜೇಶ್ ಕೆ ನೆಲ್ಲಿಬೆಟ್ಟು, ದೇವದಾಸ್ ಕಾಂಚನ್, ದೇವೇಂದ್ರ ಗಾಣಿಗ, ಭರತ್ ಗಾಣಿಗ ಉಪಸ್ಥಿತರಿದ್ದರು.

ಬಳಿಕ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡಿ, ತದನಂತರ ಕುಂಭಾಶಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯಲಾಗುವುದು. ಲೋಕಕಲ್ಯಾಣಾರ್ಥ ಪ್ರಾರ್ಥಿಸಲಾಗುವುದು ಎಂದು ದಿನೇಶ್ ಹೆಗ್ಡೆ ಮೊಳಹಳ್ಳಿ ದಂಪತಿಗಳು ತಿಳಿಸಿದರು.