ಸಾಲಿಗ್ರಾಮ: ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಕಣ್ಮಣಿಗಳು ಸನ್ಮಾನ
ಸಾಲಿಗ್ರಾಮ: ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ “ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ” ವತಿಯಿಂದ ಪ್ರತೀ ವಾರ ನಡೆಯುತ್ತಿರುವ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ “ಸನ್ಮಾನ ಕಾರ್ಯಕ್ರಮ” “ಕಾಂಗ್ರೆಸ್ ಕಣ್ಮಣಿಗಳು” ಸಾಲಿಗ್ರಾಮದಲ್ಲಿ ನಡೆಯಿತು.


ಈ ಸಂದರ್ಭ ಮಾತನಾಡಿದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿರುವವರನ್ನು ಗುರುತಿಸಿ ಗೌರವಿಸುವ ಸಲುವಾಗಿ “ಕಾಂಗ್ರೆಸ್ ಕಣ್ಮಣಿಗಳು” ಎನ್ನುವ ಪ್ರತಿ ವಾರದ ನಿರಂತರ ಸರಣಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ಪಕ್ಷ ಬಲವರ್ಧನೆ ಜತೆಗೆ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು, ಇಂದಿಗೂ ಯಾವುದೇ ಅಧಿಕಾರದ ಅಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ ಇಂದಿಗೂ ಕಾರ್ಯಕರ್ತರಾಗಿ ದುಡಿಯುತ್ತಿರುವ ಕಾಂಗ್ರೆಸ್ ಪಕ್ಷನಲ್ಲಿ ಸಕ್ರಿಯವಾಗಿ ಇರುವರನ್ನ ಗುರುತಿಸುತ್ತಿರುವುದು ಪಕ್ಷದ ಐತಿಹಾಸಿಕ ಕಾರ್ಯಕ್ರಮ ಹಾಗೂ ಎಲ್ಲಾ ಸಮಿತಿಗಳಿಗೂ ಇದು ಮಾದರಿ ಎಂದರು.

ಈ ಸಂದರ್ಭ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಲಕ್ಷ್ಮಣ ಕಾರ್ಕಡ, ವಿಶ್ವನಾಥ್ ನಾಯರಿ ಕಾರ್ತಟ್ಟು, ಸೋಮ ಮರಕಾಲ ಕಾರ್ತಟ್ಟು, ನರಸಿಂಹ ಐತಾಲ್ ಕಾರ್ತಟ್ಟು, ಮೋಹನ್ ಭಂಡಾರಿ ಕಾರ್ತಟ್ಟು ಅವರನ್ನು ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳ ಸಮ್ಮುಖದಲ್ಲಿ ಗೌರವ ಪೂರ್ವಕವಾಗಿ ಸಮ್ಮಾನಿಸಲಾಯಿತು.


ಪಕ್ಷದ ಮುಖಂಡರಾದ ಅಚ್ಯುತ ಪೂಜಾರಿ ಕಾರ್ಕಡ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕೆ. ನೆಲ್ಲಿಬೆಟ್ಟು, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ ಶೇಖರ್ ಪಿ. ಮರಕಾಲ ಕಾರ್ಕಡ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ರಮೇಶ್ ಮೆಂಡನ್ ಬಡಹೋಳಿ, ಗಣೇಶ್ ಮೆಂಡನ್ ಬೆಟ್ಲಕ್ಕಿ, ರಮೇಶ್ ಪೂಜಾರಿ ಮೂಡ್ಹೋಳಿ, ಬಸವ ಮೆಂಡನ್ ಕಾರ್ಕಡ, ಶಶಿಧರ್ ಪೂಜಾರಿ ಮೂಡ್ಹೋಳಿ, ಶ್ರೀನಿವಾಸ್ ಕಾರ್ಕಡ, ಶಿಶಿರಾ ಕಾರ್ಕಡ, ರಂಜಿತ್ ಕಾರ್ಕಡ, ಸಂದೀಪ್ ಮೂಡಹೋಳಿ, ಬಾಬಿ ಕಾರ್ಕಡ, ರೋಮಿತ್ ಕಾರ್ಕಡ, ಸುನಿಲ್ ಕಾರ್ಕಡ, ನಿತ್ಯಾನಂದ ನೈರಿ ಕಾರ್ತಟ್ಟು, ರಾಘುವೇಂದ್ರ ನೈರಿ ಕಾರ್ತಟ್ಟು ಉಪಸ್ಥಿತರಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ ಸ್ವಾಗತಿಸಿ ವಂದಿಸಿದರು.