ಬೈಂದೂರು: ಡಾಕ್ಟರ್ ಹಗ್ಡೆ ಖ್ಯಾತಿಯ ಡಾ. ಸುಧಾಕರ್ ಹೆಗ್ಡೆ ವಿಧಿವಶ
ಕುಂದಾಪುರ; ಸ್ನೇಹಪರ ನಗುಮುಖದಿಂದ ಜನಾನುರಾಗಿಯಾಗಿದ್ದ, ವೈದ್ಯನಾಗಿ ಸಮಾಜದ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿದ್ದ ಡಾ. ಸುಧಾಕರ್ ಹೆಗ್ಡೆ ವಯೋಸಹಜವಾಗಿ ಶನಿವಾರ ನಿಧನರಾದರು.

ಅವರ ಸರಳತೆ, ಸೌಮ್ಯ ನಡೆನುಡಿಗಳು, ಸ್ನೇಹಪರ ಮನೋಭಾವಗಳು ಅವರಿಗೆ ಅಪಾರ ಪ್ರೀತಿಗೆ ಪಾತ್ರವಾಗಿದ್ದವು. ಅದೇ ಕಾರಣಕ್ಕೆ ಅವರನ್ನು ಡಾಕ್ಟರ್ ಹೆಗ್ಡೆ ಎಂದೇ ಕರೆಯುತ್ತಿದ್ದರು. ಮೃತ ಡಾ. ಸುಧಾಕರ್ ಹೆಗ್ಡೆ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.