BlogCrime newsEconomyHighlightsHuman storiesLifestyleLocal newsObituaryOthersTop StoriesTrendingWomen Care

ಕಮಲಶಿಲೆ: ಯುವ ಉದ್ಯಮಿ, ಕೃಷಿಕ ಉದಯ ಛಾತ್ರ ಆತ್ಮಹತ್ಯೆ!

Aware others:

ಕುಂದಾಪುರ: ಇಲ್ಲಿನ  ಬರೆಗುಂಡಿ ನಿವಾಸಿ, ಸಿದ್ದಾಪುರದ ಛಾತ್ರ ಎಂಟರ್‌ಪೈಸಸ್ ಮಾಲಕ, ಯುವ ಉದ್ಯಮಿ, ಕೃಷಿಕ ಉದಯ ಛಾತ್ರ (43) ಅವರು ಸೆ. 17ರ ಬುಧವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದಯ ಛಾತ್ರ ಬುಧವಾರ ಬೆಳಿಗ್ಗೆ  ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಗೆ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ಆಗಮಿಸಿದ್ದರು. ಬಳಿಕ ಅವರನ್ನು ಮಹಾಸಭೆಯಲ್ಲಿ ಬಿಟ್ಟು ಸಿದ್ದಾಪುರದಲ್ಲಿರುವ ಚಾತ್ರ ಎಂಟರ್‌ಪೈಸಸ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದರೆನ್ನಲಾಗಿದೆ. 

ತಂದೆ, ತಾಯಿ ಹಾಗೂ ಪತ್ನಿ ಅಕ್ಷರ ಅವರು ಸೊಸೈಟಿಯ ಸಭೆ ಮುಗಿಸಿ ಮನೆಗೆ ಮರಳಿದಾಗ ಉದಯ ಛಾತ್ರರ ವಾಹನ ಮನೆಯಲ್ಲೇ ಇರುವುದು ಕಂಎಉ ಬಂದಿದೆ. ಅನುಮಾನಗೊಂಡ ಮನೆಯವರು ಮನೆಯ ಸುತ್ತಮುತ್ತ ಹಾಗೂ ಒಳಗೆ ಹುಡುಕಾಟ ನಡೆಸಿ ನಂತರ ಮಹಡಿಯ ಕೋಣೆಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. 

ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ. ಉತ್ತಮ ಕೃಷಿಕರು ಹೌದು. ಆರ್ಥಿಕವಾಗಿ ಸಬಲರಾಗಿದ್ದ ಇವರ ಆತ್ಮಹತ್ಯೆಗೆ ಕಾರಣಗಳೇನು? ಎಂಬ ಪ್ತಶ್ನೆ ಆಪ್ತ ವಲಯದಿಂದ ಕೇಳಿಬಂದಿದೆ. ಪತ್ನಿ ಅಕ್ಷರ ಚಾತ್ರ ಅವರು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!