ಉಡುಪಿ: 15 ಮಂದಿ ಶಿಕ್ಷಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ
ಉಡುಪಿ: 2025-26ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳ ಉತ್ತಮ ಶಿಕ್ಷಕ ಪ್ರಶಸ್ತಿಗೆ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರು ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕರಾಗಿ ಕುಂದಾಪುರ ವಲಯದ
ಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರಸ್ವತಿ, ಬೊಮ್ಮಾರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೆಯಂಗಡಿ ಸಹ ಶಿಕ್ಷಕಿ ವಸುಂಧರಾ, ಕಾರ್ಕಳ ತಾಲೂಕು ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಹರೀಶ್ ಪೂಜಾರಿ, ಬೈಂದೂರು ವಲಯ ಕಿಸ್ಮತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಮಂಗಲಾ ಗಾಣಿಗ, ಬ್ರಹ್ಮಾವರ ವಲಯ ಅಚ್ಲಾಡಿ ಮೂಡುಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವಿಜಯ ಎ ಆಯ್ಕೆಯಾಗಿದ್ದಾರೆ.





ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಂದಾಪುರ ಹೆಸ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶೇಖರ ಕುಮಾರ, ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ವೀಣಾ, ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಮಣಿ, ಬೈಂದೂರು ವಲಯ ಕಂಚಿಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ, ಮಾಳ ಕೂಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್ ಪ್ರಭಾವತಿ ಆಯ್ಕೆಯಾಗಿದ್ದಾರೆ.





ಪ್ರೌಢ ಶಾಲಾ ವಿಭಾಗದಿಂದ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಶಿಕ್ಷಕ ಶಶಿಶಂಕರ್ ಹೆಚ್ ಎಂ, ಇನ್ನಂಜೆಯ ಎಸ್ ವಿ ಹೆಚ್ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ಎ ನಟರಾಜ ಉಪಾಧ್ಯ, ಬ್ರಹ್ಮಾವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ಕೆ, ಕುಂದಾಪುರ ತಾಲೂಕು ಕಂಡ್ಲೂರು ರಾಮ್ಸನ್ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಸಂತೋಷ್, ಬೈಂದೂರು ವಲಯ ಹೆಮ್ಮಾಡಿ ಜನತಾಪ್ರೌಢ ಶಾಲೆಯ ಸಹಶಿಕ್ಷಕ ಜಗದೀಶ ಶೆಟ್ಟಿ ಆಯ್ಕೆಯಾಗಿದ್ದಾರೆ.





ನಾಳೆ ಶಿಕ್ಷಕರ ದಿನಾಚರಣೆ ನಡೆಯಲಿದ್ದು, ಬುಧವಾರ ರಾತ್ರಿವರೆಗೂ ಶಿಕ್ಷಕರ ಆಯ್ಕೆ ಬಹಳ ಗೌಪ್ಯವಾಗಿ ನಡೆದಿತ್ತು. ಗುರುವಾರ ಬೆಳಿಗ್ಗೆ ತರಾತುರಿಯಲ್ಲಿ ಆಯ್ಕೆ ಘೊಷಣೆಯಾಗಿದೆ. ಇದೀಗ ಶಿಕ್ಷಕರ ಆಯ್ಕೆಯಲ್ಲಿ ರಾಜಕೀಯ ನಡೆದಿದ್ದು, ಅದಕ್ಕಾಗಿಯೇ ಕನಿಷ್ಟ ನಾಲ್ಕು ದಿನಗಳ ಮೊದಲು ಘೋಷಣೆಯಾಗುತ್ತಿದ್ದ ಆಯ್ಕೆ ಪ್ರಕ್ರಿಯೆ ಕಡೆಗಳಿಗೆಯಲ್ಲಿ ನಡೆಸಲಾಗಿದೆ ಎಂಬ ಆರೋಪ ಶಿಕ್ಷಕ ವಲಯದಿಂದ ಕೇಳಿ ಬಂದಿದೆ.
