ಮಂಡ್ಯ: ಸಾಹಿತಿ ನಂದಾದೀಪರಿಗೆ ಕನ್ನಿಕಾಶಿಲ್ಪ ಸಾಹಿತ್ಯ ಪ್ರಶಸ್ತಿ
ಮಂಡ್ಯ: ಜಿಲ್ಲೆಯ ಸೃಜನಾತ್ಮಕ, ಉದಯೊನ್ಮುಖ ಕವಿಯತ್ರಿ, ಕಥೆಗಾರ್ತಿ, ಅಂಕಣಗಾರ್ತಿ, ಕಾದಂಬರಿಗಾರ್ತಿ “ನಂದಾದೀಪ” ರ “ಕಾವ್ಯದರ್ಶಿನಿ” ಕೃತಿಗೆ ಕನ್ನಿಕಾಶಿಲ್ಪ ಸಾಹಿತ್ಯ ಪ್ರಶಸ್ತಿ ಗೆ ಆಯ್ಕೆಯಾಗಿದೆ.

ಮಂಡ್ಯದ ಕೃಷಿಕ್ ಸರ್ವೋದಯ ಫೌಂಡೇಶನ್ ಸಭಾಂಗಣದಲ್ಲಿ ನಡೆಯುವ ಸಭಾಂಗಣದಲ್ಲಿ ಕನ್ನಿಕ ಶಿಲ್ಪ ನವೋದಯ ಟ್ರಸ್ಟ್ ವತಿಯಿಂದ ನೀಡಲಾಗುವ “ಕನ್ನಿಕಾ ಶಿಲ್ಪ ಪುಸ್ತಕ ಸಾಹಿತ್ಯ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. “ನಂದಾದೀಪ” ಎಂಬ ಕಾವ್ಯ ನಾಮದಿಂದ ಹೆಸರಾಗಿರುವ ‘ರಂಜಿತಾದರ್ಶಿನಿ’ಯವರು ಜಿಲ್ಲೆಯ ಸಾರಸ್ವತ ಲೋಕದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸುತ್ತಾ ಬಂದಿದ್ದಾರೆ.ವೃತ್ತಿಯಲಿ ವಾಣಿಜ್ಯ ವಿಷಯದ ಪ್ರಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಕತೆ,ಕಾದಂಬರಿ,ಕಾವ್ಯ,ನಾಟಕ,ವಾರ್ತಾವಾಚನ,ನಿರೂಪಕಿ..ಹೀಗೆ ಹತ್ತು ಹಲವು ಬಹುಮುಖ ಪ್ರತಿಭೆಯ ಘನಿಯಾಗಿದ್ದಾರೆ.
ಕರ್ನಾಟಕ ಫ್ರೆಸ್ ಅಸೋಸಿಯೇಷನ್ ನ ನಿರ್ದೇಶಕಿಯೂ ಆಗಿರುವ ರಂಜಿತಾದರ್ಶಿನಿಯವರು ಬಹುಮುಖ ಪ್ರತಿಭೆ. “ಸ್ಕೆಚ್” ಎನ್ನುವ ಪತ್ತೆದಾರಿ ಕಾದಂಬರಿಯನ್ನ ಮೊದಲಿಗೆ ಹೊರ ತರುವ ಮೂಲಕ ಕಾದಂಬರಿ ಲೊಕಕ್ಕೆ ಅಡಿಯಿಟ್ಟ ಇವರು ಈ ಚೊಚ್ಚಲ ಕಾದಂಬರಿಗೆ “ತ್ರಿವೇಣಿ ಯುವ ಪ್ರಶಸ್ತಿ” ಪಡೆದುಕೊಂಡಿದ್ದಾರೆ. ಕಾವ್ಯ ಮಾಲಿಕೆಯ ಗುಚ್ಚವಾಗಿ “ಕಾವ್ಯ ದರ್ಶಿನಿ” ಎಂಬ ಕೃತಿಯನ್ನು 2024 ರಲ್ಲಿ ಹೊರ ತಂದಿದ್ದಾರೆ. ಇದೇ ಆಗಸ್ಟ್ 21 ರಂದು ಇವರ ಮತ್ತೊಂದು ಕಾದಂಬರಿ “ಮನಸ್ವಿನಿ” ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿದೆ. ಚುಟುಕುಗಳ ಸಂಕಲನ “ರಾತ್ರಿ ಸುರಿದ ಮಲ್ಲಿಗೆ” ಯೂ ಬಿಡುಗಡೆಗೆ ಸಿದ್ದವಾಗಿದೆ. ನಾಟಕ ಪ್ರಾಕಾರದಲ್ಲೂ ತಮ್ಮ ಸಾಹಿತ್ಯ ಸಾಧನೆಗೈಯುತ್ತಾ ವಿಶಿಷ್ಟ ನಾಟಕವೊಂದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಇವರ ಸಾಹಿತ್ಯ, ಕಾವ್ಯ, ಕಾದಂಬರಿಗಳಲ್ಲಿ ಸ್ತ್ರೀಸಂವೇದನೆಯ ವಸ್ತುಗಳು ಪ್ರಮುಖವಾಗಿ ಕಂಡು ಬರುತ್ತವೆ. ಹೆಣ್ಣಿನ ಸ್ಥಿತಿಗತಿ, ಹೆಣ್ಣಿಗೆ ಸಿಗಬೇಕಾದ ಮಾನ್ಯತೆಗಳ ಬಗ್ಗೆ ಹಲವು ಪತ್ರಿಕೆಗಳಲ್ಲಿ ಅಂಕಣಗಾರ್ತಿಯಾಗಿ, ಪ್ರಬಂಧ, ವಿಮರ್ಶೆಗಳ ಮೂಲಕ ಬೆಳಕು ಚೆಲ್ಲುತ್ತಾ ಬಂದಿದ್ದಾರೆ. ಹಲವು ಟಿವಿ ವಾಹಿನಿಗಳಿಗೆ ನಿರೂಪಣೆ ಮತ್ತು ಧ್ವನಿ ನೀಡಿರುವ ಇವರಿಗೆ ಹಲವು ಪ್ರಶಸ್ತಿ ಗಳು ಅರಸಿಬಂದಿವೆ.
ಕನ್ಯಾಕುಮಾರಿಯಲ್ಲಿ ನಡೆದ ಅಂತರರಾಜ್ಯಮಟ್ಟದ ವಿಚಾರ ಸಂಕಿರಣ ಹಾಗು ವಾರಣಾಸಿಯಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿದ್ದಾರೆ. ಸರ್ಕಾರಿ, ಸರ್ಕಾರೇತರ ಸಂಘಸಂಸ್ಥೆಗಳ ಸಾಹಿತ್ಯ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದಾರೆ. ಸುಮಾರು 600 ಕ್ಕೂ ಹೆಚ್ಚು ಚುಟುಕಗಳನ್ನ ರಚಿಸಿ, ಕಾವ್ಯ, ಕಾದಂಬರಿ, ಬರಹಗಳಲ್ಲಿ ಸೃಜನಶೀಲ ಓದುಗ ವರ್ಗವನ್ನ ಸೃಷ್ಟಿಸಿಕೊಂಡಿದ್ದಾರೆ. ‘ಸ್ಕೆಚ್’ ಕಾದಂಬರಿಗೆ ತ್ರಿವೇಣಿ ಯುವ ಪ್ರಶಸ್ತಿ, ‘ಪ್ರತಿಲಿಪಿ’ಯಲ್ಲಿನ ನಿರಂತರ ಬರವಣಿಗೆಗೆ “ಗೋಲ್ಡನ್ ಬ್ಯಾಡ್ಜ್” ಅವಾರ್ಡ್, “ಕರುನಾಡು ಸೇವಾಪ್ರಶಸ್ತಿ”, “ಮಹಿಳಾ ಸಾಧಕಿ ಪ್ರಶಸ್ತಿ “, “ಸಮಾಜ ಸೇವಾರತ್ನ ಪ್ರಶಸ್ತಿ”, ರಾಜ್ಯ ಮಟ್ಟದ ಪ್ರೇಮಪತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ, ಜೀವನ ಜ್ಯೋತಿ ನ್ಯಾಷನಲ್ ಅವಾರ್ಡ್, ಹಾಗು 2025 ರಲ್ಲಿ ನಡೆದ ” ಕ್ವೀನ್ ಆಫ್ ಬೆಂಗಳೂರು” ಸ್ಪರ್ಧೆಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.
