ಕುಂದಾಪುರ: ರಾಜ್ಯಮಟ್ಟದ ಜಾವೆಲಿನ್ ಸ್ಪರ್ಧೆ; ಸುಜ್ಞಾನ ಪಿಯು ಕಾಲೇಜಿನ ಸಮಿತ್ ಗೆ ಮೂರನೇ ಸ್ಥಾನ
ಕುಂದಾಪುರ: ಉಡುಪಿ ಜಿಲ್ಲೆ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಉಡುಪಿ ಇವರು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜೂನಿಯರ್ ಮತ್ತು ಸೀನಿಯರ್-23 ಅಥ್ಲೆಟಿಕ್ ಮೀಟ್-2025ರಲ್ಲಿ ಸುಜ್ಞಾನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ, ಹೆಚ್.ಎಂ ಮಂಜುನಾಥ್ ಹಾಗೂ ಸ್ಮಿತಾ ದಂಪತಿಗಳ ಪುತ್ರ ಸಮಿತ್ ಜಾವೆಲಿನ್ ಎಸೆತದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಮೊದಲಾದವರು ವಿಜೇತ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕಿ ಜಯಲತಾ ಸಮಿತ್ ಗೆ ಮಾರ್ಗದರ್ಶನ ನೀಡಿದ್ದರು. ಅರುಣೆ ಮಾನೆ ತರಬೇತಿ ನೀಡಿದ್ದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಸಂಸ್ಥೆಗಳಾದ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪದವಿ ಪೂರ್ವ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.