ಅನಾಮಿಕ ದೂರುದಾರ ಪೊಲೀಸ್ ಕಸ್ಟಡಿಯಲ್ಲಿದ್ದಾನೆ – ಉಳಿದದ್ದು ಏನೂ ಗೊತ್ತಿಲ್ಲ : ಉಡುಪಿಯಲ್ಲಿ ಗೃಹಸಚಿವ ಪರಮೇಶ್ವರ್
ಉಡುಪಿ: ಅನಾಮಿಕ ದೂರುದಾರನನ್ನು ಎಸ್.ಐ.ಟಿ. ಪೊಲೀಸರು ಬಂಧಿಸಿ ಕಸ್ಟಡಿಯಲ್ಲಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಅವರು ಉಡುಪಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದರು. ಉಳಿದಂತೆ ಸುದ್ಧಿಗಾರರು ಕೇಳಿದ ಯಾವುದೇ ಪ್ರಶ್ನೆಗೂ ಸರಿಯಾಗಿ ಉತ್ತರಿಸದ ಗೃಹಸಚಿವ ಪರಮೆಶ್ವರ, ಎಸ್.ಐ.ಟಿ ವರದಿ ನೀಡಿದ ಬಳಿಕವಷ್ಟೇ ಹೇಳಿಕೆ ನೀಡಬಹುದು ಎಮದಿದ್ದಾರೆ. ಸುಜಾತಾ ಭಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಸ್.ಐ.ಟಿ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸಿದ್ಧರಾಮಯ್ಯನವರಿಗೆ ಚುನಾವಣೆ ಸಂದರ್ಭ ಹೇಳಿದ್ದ 24 ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಬಂಧಿಸುತ್ತಿಲ್ಲ ಯಾಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಹಳೆಯ ಪ್ರಕರಣ. ನ್ಯಾಯಾಲಯದಿಂದ ತಡಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಂಡರೆ ಅವರನ್ನು ಬಂಧಿಸಲಾಗುತ್ತದೆ ಎಂದಿದ್ದಾರೆ.