ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಮಾತುಲ್ ಫಲಾಹ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆ – ನೂತನ ಅಧ್ಯಕ್ಷರಾಗಿ ಹೆಚ್.ಎಸ್.ಸಿದ್ಧೀಕ್ ಆಯ್ಕೆ


ಕುಂದಾಪುರ: ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲಾ ಜಮಾತುಲ್ ಫಲಾಹ ಇದರ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ಬೈಂದೂರು ತಾಲೂಕು ಜಮಾತುಲ್ ಫಲಾಹ ಕಛೇರಿಯಲ್ಲಿ ನೆಡೆಯಿತು.


ದಕ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಗಪೂರ್ ಹಾಗೂ ದಕ ಜಿಲ್ಲಾ ಸಮಿತಿಯ ಮ್ಯಾನೇಜರ್ ಆದಂ ಬ್ಯಾರಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸಮಿತಿಯ ಆಯವ್ಯಯಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭ ನಡೆದ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಚ್ ಎಸ್ ಸಿದ್ಧೀಕ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಅಜ್ಮಲ್ ಶಿರೂರು ಮತ್ತು ನೌಷದ್, ಬಿಎಫ್ಎನ್, ಕಾರ್ಯದರ್ಶಿಗಳಾಗಿ ಶೇಖ್ ಫಯಾಜ್ ಆಲಿ, ಜೊತೆ ಕಾರ್ಯದರ್ಶಿಯಾಗಿ ಆಮೀನ್ ಗೋಳಿಹೊಳೆ, ಕೋಶಾಧಿಕಾರಿಯಾಗಿ ಮನ್ಸೂರ್ ಇಬ್ರಾಹಿಂ, ಸಂಘಟನಾ ಕಾರ್ಯದರ್ಶಿಯಾಗಿ ವೈ. ಮುಷೀನ್ ಹಾಗೂ ಪತ್ರಿಕಾ ಸಲಹೆಗಾರರಾಗಿ ಕರಣಿ ಮೊಹಿದ್ದೀನ್ ಆಯ್ಕೆಯಾದರು.