ಕೋಟ: ಅಗಲಿದ ಶಿಕ್ಷಕ, ಸಾಹಿತಿ ಸಂತೋಷ್ ಕುಮಾರ್ ಗೆ ಪಂಚವರ್ಣದಿಂದ ಹಸಿರು ನುಡಿನಮನ
ಕೋಟ: ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ ಬದುಕಿಗೆ ಸಂತೋಷ್ ಕುಮಾರ್ ಕೋಟ ತನ್ನ ಬದುಕನ್ನು ಸಮರ್ಪಸಿಕೊಂಡಿದ್ದರು ಅವರೊಬ್ಬ ಶಿಕ್ಷಕ ವೃತ್ತಿಗೆ ಸೀಮಿತವಾಗಿದರೆ ಇಡೀ ವ್ಯವಸ್ಥೆಗೆ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾನವಹಕ್ಕು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ ಎಂದರು.

ಭಾನುವಾರ ಮಣೂರು ಪಡುಕರೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಶ್ರೀರಾಮ್ ಫ್ರೆಂಡ್ಸ್ ಸಂಯೋಜನೆಯೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ 267ನೇ ಭಾನುವಾರದ ಅಂಗವಾಗಿ ಇತ್ತೀಚಿಗೆ ಅಗಲಿದ ಸಾಹಿತಿ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಇವರಿಗೆ ಹಸಿರು ನುಡಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ವ್ಯವಸ್ಥೆಯ ಬಗ್ಗೆ ಸದಾ ತುಡಿತ ಹೊಂದಿದ ಅವರು,ಸಾಂಸ್ಕೃತಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ನಿರೂಪಕರಾಗಿ ಜನಮನವನ್ನು ಗೆದ್ದಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಭಾವನೆಯಡಿ ಕಾರ್ಯನಿರ್ವಹಿಸಿ ಮಕ್ಕಳ ಶೈಕ್ಷಣಿಕ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ನಿಸ್ವಾರ್ಥ ಬದುಕಿನೊಂದಿಗೆ ಸಮಾಜದ ಬಗ್ಗೆ ಅವರಿಗಿದ್ದ ಕಾಳಜಿ ಅಪಾರವಾದ್ದದ್ದು. ಕಲಾ ಕ್ಷೇತ್ರಕ್ಕೆ ತನ್ನದೆ ಆದ ಸೇವೆ ನೀಡಿ ಅಪಾರ ಅಭಿಮಾನಿಗಳನ್ನು ಅಗಲಿರುವುದು ತುಂಬಾ ದುಃಖ ತರಿಸಿದೆ ಪಂಚವರ್ಣ ಸಂಘಟನೆಯೊಂದಿಗಿನ ಕಾರ್ಯಭಾರ ಅತ್ಯಮೂಲ್ಯ ದಿನಗಳನ್ನು ನೆನಪಿಸುವಂತೆ ಮಾಡಿದೆ. ಇಂತಹ ವ್ಯಕ್ತಿಗಳು ಮತ್ತೆ ಹುಟ್ಟಿ ಈ ಭೂಮಿಯಲ್ಲಿ ಸೇವಾ ಭಾವನೆಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಲಿಎಂದು ಆಶಿಸಿದರು.

ಸಂತೋಷ್ ಕುಮಾರ್ ಕೋಟ ಹೆಸರಿನೊಂದಿಗೆ ಮಣೂರು ಪಡುಕರೆ ರಸ್ತೆಯಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟು ಅವರ ಭಾವಚಿತ್ರಕ್ಕೆ ಪುಷ್ಭನಮನದೊಂದಿಗೆ ಮೌನಾಚರಣೆ ಸಲ್ಲಿಸಿತು. ಸಭೆಯಲ್ಲಿ ಇಂಡಿಕಾ ಕಲಾ ಬಳಗದ ಜಯರಾಮ ಶೆಟ್ಟಿ, ಕೋಟ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ, ಶಾರದ ಆರ್ ಕಾಂಚನ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಉಪಾಧ್ಯಕ್ಷ ದಿನೇಶ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಪೂಜಾರಿ, ಗಣೇಶ್ ಡೈರೆಕ್ಟರ್, ಇಂಡಿಕಾ ಬಳಗದ ಪ್ರಭಾಕರ್ ಬಿಎಸ್ಎನ್ಎಲ್ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ನಿಕಟಪೂರ್ಣ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು. ಗೀತಾನಂದ ಫೌಂಡೇಶನ್, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್, ಇಂಡಿಕಾ ಕಲಾ ಬಳಗ ಪಡುಕರೆ ಸಹಕಾರ ನೀಡಿತು.