ಬ್ರಹ್ಮಾವರ: ಹೆದ್ದಾರಿ ಸಮಸ್ಯೆಗೆ ಸಂಸದ ಕೋಟ ಜೊತೆ ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಚರ್ಚೆ

ಕುಂದಾಪುರ: ಬ್ರಹ್ಮಾವರದಲ್ಲಿನ ಹೆದ್ದಾರಿ ಸಮಸ್ಯೆಯ ಕುರಿತು ಸಮಿತಿ ಇಂದು ಮಾನ್ಯ ಲೋಕಸಭಾ ಸದಸ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚಿಸಿತು.

ಇದೇ ಸಂದರ್ಭ ಬ್ರಹ್ಮಾವರ ಫ್ಲೈ ಓವರ್ ನಿರ್ಮಾಣ ಹಾಗೂ ಸರ್ವೀಸ್ ರಸ್ತೆ ನಿರ್ಮಿಸುವಂತೆ ಮನವಿ ಮಾಡಲಾಯಿತು. ಇಲ್ಲದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಮನವಿ ನೀಡಲಾಯಿತು.

ಸಮಿತಿ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ, ಬಿ.ಎನ್ ಶಂಕರ ಪೂಜಾರಿ, ಎಚ್.ದಯಾನಂದ ಶೆಟ್ಟಿ, ದೇವಪ್ಪ ಕಾಂಚನ್, ರಾಜು ಪೂಜಾರಿ, ವಿಜಯಕುಮಾರ್, ಆಲ್ಬರ್ಟ್ ಲೂವಿಸ್, ವಸಂತ ಶೆಟ್ಟಿ, ಅಲ್ವರಿಸ್ ಡಿಸಿಲ್ವ, ಪ್ರತೀತ್ ಹೆಗ್ಡೆ, ಬಿರ್ತಿ ಸಂತೋಷ್ ಪೂಜಾರಿ, ಸುಭಾಸ್ ಚಂದ್ರ ನಾಯಕ್, ರಿತೇಶ್ ಶೆಟ್ಟಿ, ಸಾತ್ವಿಕ್ ಭಂಡಾರಿ, ಶೋಭಿತ್, ಪ್ರಜ್ವಲ್, ಸೀತಾರಾಮ್ ಪೂಜಾರಿ ಹಾಜರಿದ್ದರು.