ಸುಣ್ಣಾರಿ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವವನೇ ನಿಜವಾದ ಗುರು – ಎಕ್ಸಲೆಂಟ್ ಕಾಲೇಜಿನ ಗುರುವಂದನೆಯಲ್ಲಿ ವಿ. ಮಾಧವ ಅಡಿಗ

ಕುಂದಾಪುರ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವವನೇ ನಿಜವಾದ ಶಿಕ್ಷಕ. ಶಿಕ್ಷಕನನ್ನು ಗೌರವಿಸುವುದು ಅಂದರೆ ಅಜ್ಞಾನವನ್ನು ದೂರ ಮಾಡುವುದು ಸುಜ್ಞಾನದ ಕಡೆಗೆ ಸಾಗುವುದು ಎಂದರ್ಥ. ಉತ್ತಮ ಶಿಕ್ಷಕರಿಗೆ ಸಲ್ಲಿಸುವ ಗುರುವಂದನೆ ನಮ್ಮ ಸಂಸ್ಕೃತಿಯಾಗಬೇಕು ಎಂದು ಸಂಸ್ಕೃತ ಭಾಷಾ ನಿವೃತ್ತ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗ ಹೇಳಿದರು.
ಕುಂದಾಪುರ ಸಮಿಪದ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿಯಲ್ಲಿ ಜು. 10 ರಂದು ಗುರುವಾರ ಬೆಳಿಗ್ಗೆ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾದ ನಡೆದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ವಿದ್ವಾನ್ ಮಾಧವ ಅಡಿಗ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿಕ್ಷಕ ಶ್ರೀನಿವಾಸ್ ವೈದ್ಯ, ಹಾಗೂ ಅಧ್ಯಾಪಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯನಿ ಸರೋಜಿನಿ ಆಚಾರ್ಯ ಸ್ವಾಗತಿಸಿದರು. ಶಿಕ್ಷಕ ಸಂದೀಪ್ ನಿರೂಪಿಸಿದರು. ಶಿಕ್ಷಕಿ ಚಂದನ ವಂದಿಸಿದರು.
