ಕೋಟ: ಮನೆಗೆ ನುಗ್ಗಿ ಕಳವು
ಕೋಟ: ಶನಿವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ದೇವರ ಕೋಣೆಯಲ್ಲಿದ್ದ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.

ಇಲ್ಲಿನ ದಾಕ್ಷಾಯಿಣಿ ರಘುರಾಮ್ ಎಂಬುವರು ಮನೆಯಲ್ಲಿ ರಾತ್ರಿ ವೇಳೆ ಘಟನೆ ನಡೆದಿದ್ದು, ಕಳ್ಳರು ಮನೆಯ ಬಾಗಿಲಿನ ಬೀಗ ಒಡೆದು ಒಳ ಪ್ರವೇಶಿಸಿ, ದೇವರ ಕೋಣೆಯಲ್ಲಿದ್ದ ಎರಡು ದೊಡ್ಡ ಬೆಳ್ಳಿಯ ಕಾಲುದೀಪ, ಎರಡು ಸಣ್ಣ ಬೆಳ್ಳಿಯ ಕಾಲುದೀಪ, ಒಂದು ಬೆಳ್ಳಿಯ ಹರಿವಾಣ ಒಟ್ಟು ಅಂದಾಜು 150 ಗ್ರಾಂ ತೂಕದ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವು ಗೈದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
