BlogCulturalEconomyEntertainmentFashionHighlightsHuman storiesLifestyleLocal newsOthersTop StoriesTrending

ಜೂ.27 ರಿಂದ 29ರವರೆಗೆ  ಬೈಂದೂರಿನಲ್ಲಿ ಹಲಸು ಹಾಗೂ ಕೃಷಿ ಮೇಳ

Aware others:

ಬೈಂದೂರು: ಬೈಂದೂರು ಉತ್ಸವ ಸಮಿತಿ ಹಾಗೂ ರೈತೋತ್ಥಾನ ಬಳಗ ನೇತೃತ್ವದಲ್ಲಿ, ಸಮಷ್ಟಿ ಪ್ರತಿಷ್ಠಾನ ರಿ. ಹಾಗೂ ರೋಟರಿ ಕ್ಲಬ್ ಬೈಂದೂರು ಸಹಯೋಗದೊಂದಿಗೆ ಬೈಂದೂರಿನ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಜೂನ್ 27ರ ಶುಕ್ರವಾರದಿಂದ 29ರ ಭಾನುವಾರದ ತನಕ ಮೂರು ದಿನಗಳ ಹಲಸು ಮತ್ತು ಕೃಷಿ ಮೇಳ ಇಲ್ಲಿನ ಯಡ್ತರೆ ಬಂಟರ ಭವನದಲ್ಲಿ ಜರುಗಲಿದೆ ಎಂದು ಸಂಘಟಕ ಶ್ರೀಧರ ಮರವಂತೆ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಚಾಲನೆ ನೀಡಲಿದ್ದು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ವೇಳೆ ಸ್ಥಳೀಯ ಸಾಧಕ ಕೃಷಿಕರಿಗೆ ಸನ್ಮಾನ ನಡೆಯಲಿದೆ. ಆಧುನಿಕ ಕೃಷಿ ಮಾಹಿತಿ ಕಾರ್ಯಾಗಾರಗಳು ನಡೆಯಲಿದೆ. ಮೂರು ದಿನಗಳು ಕೂಡ ವಿವಿಧ ತಳಿಯ ಹಲಸು ಮತ್ತು ಮಾವಿನ ಹಣ್ಣಿನ ಪ್ರದರ್ಶನ ಇರಲಿದ್ದು, ವಿಶೇಷವಾಗಿ ಮೇಳವನ್ನು ಆಯೋಜಿಸಲಾಗಿದೆ. ಹತ್ತಾರು ಹಲಸು ಮತ್ತು ಮಾವಿನ ಉಪ ಉತ್ಪನ್ನಗಳ ಮಳಿಗೆ, ಹಣ್ಣಿನ ಖಾದ್ಯಗಳ ಮಳಿಗೆ ಹಾಗೂ ಇತರ ಆಹಾರ ಮಳಿಗೆ, ವಿವಿಧ ತಳಿಯ ಹಲಸು ಮತ್ತು ಮಾವಿನ ಗಿಡಗಳು ಮತ್ತು ಇತರ ಹಣ್ಣು, ಹೂವಿನ ಗಿಡಗಳ ಪ್ರದರ್ಶನ ಮಾರಾಟ ಮಳಿಗೆ, ತರಕಾರಿ ಬೀಜದ ಮಳಿಗೆ, ಕೃಷಿ ಯಂತ್ರೋಪಕಾರಣ ಮತ್ತು ಗೊಬ್ಬರ ಮಾರಾಟ ಮಳಿಗೆ, ಕರಕುಶಲ ಹಾಗೂ ನೆಯ್ಗೆ ಬಟ್ಟೆ ಮಳಿಗೆ, ಇತರ ಗೃಹಪಯೋಗಿ ವಸ್ತುಗಳ ಮಳಿಗೆ ಪ್ರದರ್ಶನದಲ್ಲಿ ಇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!