BlogCrime newsEducationFashionHighlightsHuman storiesLifestyleLocal newsOthersTop StoriesTrendingWomen Care

ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ

Aware others:

ಕುಂದಾಪುರ: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನ ಕ್ಯಾಂಪಿಗೆ ಹೋಗಿ ಬರುತ್ತೇನೆ ಎಂದು ಮನೆ ಬಿಟ್ಟು ಹೋದವಳು ನಾಪತ್ತೆಯಾಗಿದ್ದಾಳೆ. ಕುಮದಾಪುರದ ವಡೇರಹೋಬಳಿಯ 21 ವರ್ಷ ವಯಸ್ಸಿನ ಯುವತಿ ನಾಪತ್ತೆಯಾದವಳು. ಈಕೆ ಬ್ರಹ್ಮಾವರ ಸಮೀಪದ ಮಾಬುಕಳದ ಫಾರ್ಚುನ್‌ ಅಕ್ಯಾಡಮಿ ಹೆಲ್ತ್‌ ಸೈನ್ಸ್‌ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್‌ ಮಾಡುತ್ತಿದ್ದಳು. ಜೂನ್ 13ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿಗೆ ಕ್ಯಾಂಪ್‌ ಗೆ ಹೋಗಲಿದೆ ಎಂದು ಹೇಳಿ ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ. ಇದರಿಂದ ಗಾಬರಿಗೊಂಡ ಮನೆಯವರು ಕಾಲೇಜಿನಲ್ಲಿ ವಿಚಾರಿಸಿದಾಗ ಮಂಗಳೂರಿನಲ್ಲಿ ಯಾವುದೇ ಕ್ಯಾಂಪ್‌ ಇರುವುದಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!