ಕುಂದಾಪುರ: ಅಕ್ರಮ ಮರಳುಗಾರಿಕೆ – ಮಾಜೀ ಕೌನ್ಸಿಲರ್, ಸೊತ್ತುಗಳು ಪೊಲೀಸ್ ವಶ, ಮತ್ತೊಬ್ಬ ಪರಾರಿ!

ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಕುಂದಾಪುರ ಪುರಸಭೆಯ ಮಾಜೀ ಕೌನ್ಸಿಲರ್ ಉದಯ ಮೆಂಡನ್ ರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ಫೈಬರ್ ದೋಣಿ, ಮರಳು, ಟಿಪ್ಪರ್ ವಾಹನ ಸೇರಿದಂತೆ ಒಟ್ಟು 5,20,000 ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ರಿಂಗ್ ರೋಡ್ ಸಮೀಪದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಕುಂದಾಪುರ ಪೊಲೀಸರಿಗೆ ಸಿಕ್ಕಿದ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಹೊಳೆಯಲ್ಲಿ ಕೆಲವು ಜನರು ಮರಳನ್ನು ತೆಗೆದು ದೋಣಿಯಲ್ಲಿ ತುಂಬಿಸುತ್ತಿದ್ದು, ಸ್ಥಳದಲ್ಲಿದ್ದ ಉದಯ ಮೆಂಡನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಾರೆಂದು ತಿಳಿದು ಬಂದಿದೆ. ಸುನಿಲ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.