BlogEconomyGovernmentHealthHighlightsHuman storiesLifestyleLocal newsOthersPoliticsState newsSuccess storiesTop StoriesTrending

ಬೈಂದೂರು: ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳಿಗೆ ಭೂ ಮಂಜೂರು- ಶಾಸಕ ಗುರುರಾಜ್ ಗಂಟಿಹೊಳೆ

Aware others:

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿ, ನಾಡ ಹಾಗೂ ಹೇರೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಮಂಜೂರಾಗಿದ್ದು, ಶೀಘ್ರದಲ್ಲೇ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.

ರಾಜ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ 2023-24 ನೇ ಸಾಲಿನಲ್ಲಿ 15 ನೇ ಹಣಕಾಸು ಆಯೋಗದಡಿ ರಾಜ್ಯದ ಆರೋಗ್ಯ ವಲಯದ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ  ಕ್ಷೇತ್ರದ  ಹೊಸಂಗಡಿ, ನಾಡ ಹಾಗೂ ಹೇರೂರು ಗ್ರಾಮದಲ್ಲಿ ತಲಾ ಒಂದೊಂದರಂತೆ ಮೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡಕ್ಕೆ ಸರಕಾರಿ ಜಾಗ ಮಂಜೂರಾತಿ ಮಾಡಲಾಗಿದ್ದು ಶೀಘ್ರದಲ್ಲೇ ಹೊಸದಾಗಿ  1.95 ಕೋಟಿ ವೆಚ್ಚದಲ್ಲಿ 3 ಕಡೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ  ಸರ್ವೇ ನಂಬ್ರ 49/1  ರಲ್ಲಿ 0.29 ಎಕ್ರೆ  ವಿಸ್ತೀರ್ಣ,  ಬೈಂದೂರು ತಾಲೂಕು ನಾಡ ಗ್ರಾಮದ ಸರ್ವೇ ನಂಬ್ರ 185 ರಲ್ಲಿ 0.05 ಎಕ್ರೆ ಹಾಗೂ ಹೇರೂರು ಗ್ರಾಮದ ಸರ್ವೇ ನಂಬ್ರ 83 ರಲ್ಲಿ 0.10 ಎಕ್ರೆ ಜಾಗವನ್ನು ಆರೋಗ್ಯ ಮತ್ತು  ಕ್ಷೇಮ ಕೇಂದ್ರದ( ಹೆಲ್ತ್ & ವೆಲ್ ನೆಸ್ ಸೆಂಟರ್) ಉದ್ದೇಶಕ್ಕೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಸರಿಗೆ ಮಂಜೂರು ಮಾಡಿಸಲಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!