BlogEconomyEntertainmentFashionGovernmentHealthHighlightsHuman storiesLifestyleLocal newsOthersState newsSuccess storiesTechTop StoriesTrendingWomen Care

ಕುಂದಾಪುರ: ವೈದ್ಯ ಲೋಕದ ಸಾಧಕಿ ಡಾ. ರಿಶೆಲ್ ರೆಬೆಲ್ಲೊರಿಗೆ ಸನ್ಮಾನ.

Aware others:

ಕುಂದಾಪುರ: ವೈದ್ಯಕೀಯ ಲೋಕದ ಮೂಳೆ ಮತ್ತು ಕೀಲು ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ರಿಶೆಲ್ ರೆಬೆಲ್ಲೊ ರಿಗೆ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ವತಿಯಿಂದ ಸೋಮವಾರ ದಿನಾಂಕ 26.05.2025ರಂದು ಸನ್ಮಾನ ಮಾಡಲಾಯಿತು.

ಮಹಿಳಾ ವೈದ್ಯರು ಪುರುಷ ವೈದ್ಯರಿಗಿಂತ ಹೆಚ್ಚು ತಾಳ್ಮೆ ಉಳ್ಳವರು ಎನ್ನುವ ಪ್ರತೀತಿ ಇದೆ. ಅಂತಹಾ ಪ್ರತೀತಿಗೆ ಸಾಕ್ಷಿಯಾದವರು ಡಾ. ರಿಶೆಲ್ ರೆಬೆಲ್ಲೊ. ಇಂತಹಾ ಸಾಧಕಿಯರು ಕುಂದಾಪುರದಲ್ಲಿ ಇರುವುದು ಅತ್ಯಂತ ಹೆಮ್ಮೆಯ ವಿಚಾರ. ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಪ್ರೇರಣಾದಾಯಕ ಎಂದು ಖ್ಯಾತ ಕ್ರಿಮಿನಲ್ ಲಾಯರ್ ರವಿಕಿರಣ್ ಮುರ್ಡೇಶ್ವರ ಹೇಳಿದರು.

ಸಮಾಜ ಸೇವಕಿ, ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಮುಖ್ಯಸ್ಥೆ ರಾಧಾದಾಸ್ ಕುಂಭಾಸಿ, ಹಿರಿಯ ವಕೀಲ, ಸಾಹಿತಿ, ವಾಗ್ಮಿ ಎ ಎಸ್ ಎನ್ ಹೆಬ್ಬಾರ್, ಶಲಿಯೆಟ್ ರೆಬೆಲ್ಲೊ, ಸುಧಾಕರ ಶೆಟ್ಟಿ, ಶೇಖರ ಶೆಟ್ಟಿ, ತಿಲೋತ್ತಮ ನಾಯಕ್, ಪ್ರೇಮಾ ಎಚ್, ಸಿಡಿಪಿಒ ಉಮೇಶ ಕೋಟಿಯಾನ್ ಮತ್ತಿತರರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!