BlogCulturalEconomyEducationEntertainmentFashionGovernmentHealthHighlightsHuman storiesLifestyleLocal newsNatureOthersSportsState newsSuccess storiesWomen Care

ಮಂಗಳೂರು: ರಾಜ್ಯ ಮಟ್ಟದ ಕಿರಿಯರ ಅಥ್ಲೇಟಿಕ್ಸ್ ನಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಸಾಧನೆ

Aware others:

ಕುಂದಾಪುರ: ದಕ್ಷಿಣಕನ್ನಡ ಅಥ್ಲೇಟಿಕ್ಸ್ ಅಸೋಸಿಯೇಷನ್ ಹಾಗೂ ಎಂಡೋರೆನ್ಸ್ ಸ್ಪೋರ್ಟ್ಸ್ ಅಕಾಡೆಮಿ ಇವರ ಸಹಯೋಗದೊಂದಿಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿರಿಯರ ಅತ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ 3 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕಗಳು ಸೇರಿದಂತೆ 7 ಪದಕಗಳೊಂದಿಗೆ ಗಮನಾರ್ಹ ಸಾಧನೆ ತೋರಿದ್ದಾರೆ.

8 ವರ್ಷ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಭವಿಷ್ಯ ಅವರು ಸ್ಟ್ಯಾಂಡಿಂಗ್ ಬೋರ್ಡ್ ಜಂಪ್ ನಲ್ಲಿ ಕಂಚಿನ ಪದಕ ಹಾಗೂ ಬಾಲ್ ಥ್ರೋ ನಲ್ಲಿ ಕಂಚಿನ ಪದಕ, 10 ವರ್ಷ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಅರ್ಥ ಎಸ್ ಶೆಟ್ಟಿಗೆ 30 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ ಬಾಲ್ ಥ್ರೋನಲ್ಲಿ ಚಿನ್ನದ ಪದಕ, 10 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ತನಿಶ್ ಯು ಶೆಟ್ಟಿಗೆ ಬಾಲ್ ಥ್ರೋನಲ್ಲಿ ಚಿನ್ನದ ಪದಕ, 14 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ಪ್ರಕುಲ್ ಆರ್ ಕುಂದರ್ ಗೆ ಲಾಂಗ್ ಜಂಪ್ ನಲ್ಲಿ ಬೆಳ್ಳಿ ಪದಕ, 16 ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ರೋನಕ್ ಆರ್ ಖಾಗೆ ಶಾಟ್ ಪುಟ್ ಅಲ್ಲಿ ಬೆಳ್ಳಿ ಪದಕ ಲಭಿಸಿದೆ. ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅಕಾಡೆಮಿಯ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!