ಕುಂದಾಪುರ: ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಗೆ ಎಂಟು ರ್ಯಾಂಕ್!








ಕುಂದಾಪುರ: ಈ ಬಾರಿಯ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕುಂದಾಪುರದ ವಿಕೆಆರ್ ಆಂಗ್ಲಮಾಧ್ಯಮ ಶಾಲೆಗೆ ಎಂಟು ರ್ಯಾಂಕ್ ಗಳು ಲಭಿಸಿವೆ. ವಿದ್ಯಾರ್ಥಿನಿ ಸಾಯಿಸ್ಪರ್ಷ 623 (99.68%) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದರೆ ಬಿ.ವಿ.ಜಯಸೂರ್ಯ 622 (99.52%), ಪ್ರಿಯಾ 622 (99.52%) ಪಡೆದು ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಭಕ್ತಿ ಶೆಟ್ಟಿ ಹಾಗೂ ನಿರೀಕ್ಷ ಎನ್ ಶೆಟ್ಟಿಗಾರ್ ತಲಾ 621 (99.36%) ಅಂಕಗಳನ್ನು ಪಡೆದು ಐದನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಾನ್ವಿತ್ ಶೆಟ್ಟಿ ಮತ್ತು ವಿನ್ಯಾಸ್ ಅಡಿಗ 619 ಅಂಕಗಳನ್ನು (99.04%) ಪಡೆದು ರಾಜ್ಯಕ್ಕೆ ಆರನೆ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಮನ್ವಿ ಎಸ್ 616 (98.56%) ಅಂಕ ಪಡೆದುಕೊಂಡು ಹತ್ತನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಒಟ್ಟು 106 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8 ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್ ವಿಜೇತರಾದರೆ, 60 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 45 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂಧಕ್ಕೆ ಶಾಲಾಡಳಿತ ಮಂಡಳಿ ಅಭಿನಂದಿಸಿದ್ದಾರೆ.