ಸಿದ್ಧಾಪುರ: ಎಸ್ಸೆಸ್ಸೆಲ್ಸಿಯಲ್ಲಿ ಸರಸ್ವತಿ ವಿದ್ಯಾಲಯಕ್ಕೆ ಶೇ 100 ಫಲಿತಾಂಶ
ಸಿದ್ಧಾಪುರ: ಇಲ್ಲಿನ ಸರಸ್ವತಿ ವಿದ್ಯಾಲಯವು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದೆ.

ಈ ಬಾರಿ ಒಟ್ಟು 20 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ ಒಟ್ಟು 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗಿರೀಶ್ ಎ ನಾಯಕ್ 613 (98.08%), ಸಂಚಿತ 611 (97.76%), ಮೇಘನಾ. ಸಿ 608 (97.28%) , ಭಾವನಾ 605 (96.8%), ಆದಿತ್ಯ ಶೆಟ್ಟಿ 593 (94.88%), ಅರ್ಚನಾ. ಎ 564 (90.24%), ಸುಭೀಕ್ಷಾ 563 (90.08%), ಪಡೆದುಕೊಂಡಿದ್ದಾರೆ. ಇನ್ನು ಪ್ರಜ್ವಲ್ 562, ಭವ್ಯಶ್ರೀ 560, ಅಜಯ್ 553, ಪ್ರಾಕ್ಷಿ 545, ಪ್ರಕೃತಿ 536 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸುಚಿತಾ 509, ಸೃಜನ್ 499, ಅಭಿಕ್ಷಾ 495, ಸಾತ್ವಿಕ್ 493, ಮಾನ್ಯ 464, ವಿಲಾಸ್ 415, ಪ್ರೇಕ್ಷಿತ್ 414, ಪ್ರಜ್ವತ್ 388 ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲೆ ಶ್ವೇತಾ ಗಣೇಶ್ ತಿಳಿಸಿದ್ದಾರೆ.