ಕಾರ್ಕಳ: SSLC ಫಲಿತಾಂಶ – ಕಾರ್ಕಳದ ಸ್ವಸ್ತಿ ಕಾಮತ್ ಗೆ ಔಟ್ ಆಫ್ ಔಟ್
ಕಾರ್ಕಳ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ಈ ಬಾರಿ 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಕೂಡ ಫುಲ್ ಮಾರ್ಕ್ಸ್ ಪಡೆದವರ ಸಾಲಿಗೆ ಸೇರ್ಪಡೆಯಾಗಿದ್ದಾಳೆ. ಇಲ್ಲಿನ ಸ್ವಸ್ತಿ ಕಾಮತ್ 625 ಮಾರ್ಕ್ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾಳೆ.