ಕುಂದಾಪುರ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ


ಕುಂದಾಪುರ: 2024-25ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಟ್ಟು 229 ವಿದ್ಯಾರ್ಥಿಗಳು ಹಾಜರಾಗಿದ್ದು ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ.




ಹರಿಪ್ರಸಾದ್ ಎಮ್.ಎಸ್(622), ಸಾಯಿ ಕೀರ್ತನಾ(622) ಶಾಲಾ ಮಟ್ಟದಲ್ಲಿ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಆಕಾಂಕ್ಷ ಎಸ್ ಪೈ (621), ಅಮೂಲ್ಯ ಶೇಟ್ (621), ಶರ್ವಾಣಿ ಉಳವಿ (621), ಶ್ರೇಯಾ (621) ದ್ವಿತೀಯ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ 5ನೇ ಸ್ಥಾನ ಮತ್ತು ಆಸ್ತಿಕ್ ಕೆ. (620), ಮಂಜುಶ್ರೀ ಕೆ.ಪಿ (620), ನೇಹಾ ಆರ್ (620), ಸಮೃದ್ಧಿ ನಾಯಕ್ (620) ತೃತೀಯ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ.




229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 59 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 115 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ, 66 ವಿದ್ಯಾರ್ಥಿಗಳು A ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು B+, 14 ವಿದ್ಯಾರ್ಥಿಗಳು B ಹಾಗೂ 4 ವಿದ್ಯಾರ್ಥಿಗಳು c+ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದು ಶೇ. 100 ಫಲಿತಾಂಶ ಬಂದಿದೆ ಎಂದು ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗಳಿಗೆ ಹಾಗೂ ಶಿಕ್ಷಕ, ಶಿಕ್ಷಕೇತರ ವರ್ಗಕ್ಕೆ ಶುಭಾಶಯ ತಿಳಿಸಿದೆ.