BlogEducationFashionGovernmentHighlightsHuman storiesLifestyleLocal newsOthersState newsSuccess storiesTop StoriesTrendingWomen Care

ಎಸ್ಸೆಸ್ಸೆಲ್ಸಿ ಫಲಿತಾಂಶ – ದಕ್ಷಿಣ  ಕನ್ನಡ ಪ್ರಥಮ, ಉಡುಪಿ ದ್ವಿತೀಯ. ಕಲ್ಬುರ್ಗಿ ಕೊನೆ ಸ್ಥಾನ

Aware others:

ಕುಂದಾಪುರ: ಬಹು ನಿರೀಕ್ಷಿತ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇ. 91.12 ಫಲಿತಾಂಶ ಪಡೆದುಕೊಂಡು ಪ್ರಥಮ ಸ್ಥಾನ ಪಡೆದುಕೊಂಡರೆ ಉಡುಪಿ ಜಿಲ್ಲೆ ಶೇ.89.96 ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕಲ್ಬುರ್ಗಿ ಜಿಲ್ಲೆ ಶೇ. 66.14 ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

7,90,890 ರೆಗ್ಯುಲರ್ ಅಭ್ಯರ್ಥಿಗಳ ಪೈಕಿ 5,23,075 ವಿದ್ಯಾರ್ಥಿಗಳು ಹಾಗೂ 13,154 ಖಾಸಗೀ ಅಭ್ಯರ್ಥಿಗಳ1,072 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 33,952 ಪುನರಾವರ್ತಿತ ಶಾಲಾ ಅಭ್ಯರ್ಥಿಗಳ ಪೈಕಿ 628 ಅಭ್ಯರ್ಥಿಗಳು, 4177 ಪುನರಾವರ್ತಿತ ಖಾಸಗೀ ಅಭ್ಯರ್ಥಿಗಳ ಪೈಕಿ 209 ಅಭ್ಯರ್ಥಿಗಳು ಉತ್ತೀರಣರಾಗಿದ್ದಾರೆ. ಒಟ್ಟು 2,818 ಪರೀಕ್ಷಾ ಕೇಂದ್ರಗಳಲ್ಲಿ 8,42,713 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 524984 ಅಭ್ಯರ್ಥಿಗಳು ಉತ್ತೀರ್ಣರಾಗಿ ಶೆ 62.34 ಶೇ ಫಲಿತಾಂಶ ದೊರಕಿದೆ.

5,936 ಸರ್ಕಾರೀ ಶಾಲೆಯ 321841 ವಿದ್ಯಾರ್ಥಿಗಳ ಪೈಕಿ 201790 ವಿದ್ಯಾರ್ಥಿಗಳು ಉತ್ತೀರ್ಣರಾಗಿ 62.7% ಫಲಿತಾಂಶ, ಅನುದಾನಿಯ 3583 ಶಾಲೆಗಳ ಪೈಕಿ 2,00,214 ವಿದ್ಯಾರ್ಥಿಗಳು ಪರೀಕ್ಷೆ ಬರೆದು 118066 ಉತ್ತೀರಣರಾಗಿ ಶೇ. 58.97 ಫಲಿತಾಂಶ, 6364 ಅನುದಾನ ರಹಿತ ಶಾಲೆಗಳಲ್ಲಿ 2,68,835 ವಿದ್ಯಾರ್ಥಿಗಳ ಪೈಕಿ 2,03,219 ಉತ್ತೀರ್ಣರಾಗಿ ಶೇ. 75.59 ಗರಿಷ್ಟ ಫಲಿತಾಂಶ ಪಡೆದುಕೊಂಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!