BlogAccidentCrime newsEducationHighlightsHuman storiesLifestyleLocal newsObituaryState newsTop StoriesTrendingWomen Care

ಗೋಕರ್ಣ : ಜಟಾಯು ತೀರ್ಥದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ಸಾವು

Aware others:

ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿಯರು ಈಜಲು ಹೋಗಿ ಸಮುದ್ರದ ಅಲೆಗೆ ಕೊಚ್ಚಿಹೋಗಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಜಟಾಯು ತೀರ್ಥದಲ್ಲಿ ನಡೆದಿದೆ

ತಮಿಳುನಾಡು ಮೂಲದ ತಿರುಚಿಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರಾದ ಕನಿಮೋಳಿ ,ಹಿಂದುಜ ಸಾವು ಕಂಡ ವಿದ್ಯಾರ್ಥಿನಿಯರಾಗಿದ್ದಾರೆ. ತಮಿಳುನಾಡಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ 23 ವೈದ್ಯಕೀಯ ವಿದ್ಯಾರ್ಥಿಗಳು ಆಗಮಿಸಿದ್ದರು.ಇಬ್ಬರು ವಿದ್ಯಾರ್ಥಿನಿಯರು ಸಂಜೆ ಜಟಾಯು ತೀರ್ಥದ ಬಳಿ ಸಮುದ್ರದಕ್ಕೆ ಇಳಿದಿದ್ದರು.

ಈ ವೇಳೆ ಸಮುದ್ರದ ಅಲೆಗೆ ಇಬ್ಬರು ವಿದ್ಯಾರ್ಥಿಗಳು ಕೊಚ್ಚಿಹೋಗಿದ್ದರು. ಇವರನ್ನು ರಕ್ಷಣೆ ಮಾಡಲು ಹೋದ ಸ್ಥಳೀಯರು ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದು, ಅದೃಷ್ಟವಶಾತ್ ಸ್ಥಳೀಯರು ರಕ್ಷಣೆಗೆ ಹೋದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರ ಶವಗಳನ್ನು ಹೊರತೆಗೆಯಲಾಗಿದ್ದು, ಗೋಕರ್ಣ ಸಬ್ ಇನ್ಸ್ ಪೆಕ್ಟರ್ ಖಾದರ್ ರವರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಾಲಗಿದೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!