BlogEducationGovernmentHighlightsHuman storiesLifestyleLocal newsOthersState newsTechTop StoriesTrending

ಸಿಇಟಿ ಹಾಲ್ ಟಿಕೆಟ್‌ನಲ್ಲಿ ತಪ್ಪು ವಿಳಾಸ – ಪರೀಕ್ಷಾ ಕೇಂದ್ರ ಹುಡುಕಲು ಪರದಾಡಿದ ವಿದ್ಯಾರ್ಥಿಗಳು!

Aware others:

ಕುಂದಾಪುರ: ರಾಜ್ಯದಾದ್ಯಂತ ಬುಧವಾರ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು. ಆದರೆ ಕುಂದಾಪುರ ತಾಲೂಕಿನ ಕೋಟೇಶ್ವರದ ಪಬ್ಲಿಕ್ ಸ್ಕೂಲಿನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿತ್ತು. ಆದರೆ ಪರೀಕ್ಷೆಗಾಗಿ ಕೋಟೇಶ್ವರಕ್ಕೆ ಬಂದ ಬಹುತೇಕ ಹೊರ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೇಟ್‌ ನಲ್ಲಿ ಸೂಚಿಸಲಾದ ಕೋಟೇಶ್ವರದ ಸಿಇಟಿ ಪರೀಕ್ಷಾ ಕೇಂದ್ರವನ್ನು ಹುಡುಕಾಡಲು ಪರದಾಟ ನಡೆಸಿದ ಘಟನೆ ನಡೆದಿದೆ.

ಇಲಾಖೆಯಿಂದ ನೀಡಲಾಗಿದ್ದ ಹಾಲ್ ಟಿಕೇಟ್ ಗಳಲ್ಲಿ ಪರೀಕ್ಷಾ ಕೇಂದ್ರದ ವಿಳಾಸವು ಸರ್ಕಾರಿ ಪಿಯು ಕಾಲೇಜು, ಏನ್‌. ಎಚ್‌. 66, ಕೋಟೇಶ್ವರ ಎಂದು ನಮೂದಿಸಲಾಗಿತ್ತು. ಆದರೆ ಇಡೀ ಕೋಟೇಶ್ವರ ಜಾಲಾಡಿದರೂ ಅಂತಹ ಹೆಸರಿನ ಯಾವುದೇ ಪರೀಕ್ಷಾ ಕೇಂದ್ರವು ಪತ್ತೆಯಾಗದೆ ವಿದ್ಯಾರ್ಥಿಗಳಿಗೆ ಗೊಂದಲವುಂಟಾಯಿತು.

ವಿದ್ಯಾರ್ಥಿಗಳು ಕೋಟೇಶ್ವರದ ಕಾಳಾವರ ವರದರಾಜ್ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿಗೆ ಹೋಗಿ ನಿರಾಶರಾಗಿ ಹಿಂತಿರುಗಿದರೆ ಇನ್ನು ಕೆಲವರು ಗೆ ಗೂಗಲ್‌ ಜಾಲಾಡಿದರು. ಆದರೆ ಹಾಲ್ ಟಿಕೆಟ್ ನಲ್ಲಿ ನಮೂದಿಸಲಾದ ವಿಳಾಸ ಪತ್ತೆಯಾಗಲಿಲ್ಲ.  ಬಳಿಕ ಸ್ಥಳೀಯರು ಪಬ್ಲಿಕ್ ಸಕ್ಊಲ್ ನಲ್ಲಿ ಇರಬಹುದು ಎಂಬುದಾಗಿ ಸೂಚಿಸಿದ್ದ ಮೇರೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸಾಧ್ಯವಾಯಿತು.


Aware others:

Leave a Reply

Your email address will not be published. Required fields are marked *

error: Content is protected !!