ಕುಂದಾಪುರ: ಗೂಗಲ್ ರಿವಾರ್ಡ್ ಪಾಯಿಂಟ್ ಲಿಂಕ್ ನಿಂದ ಲಕ್ಷಾಂತರ ರೂಪಾಯಿ ಪಂಗನಾಮ
ಕುಂದಾಪುರ: ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹೊಂದಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಗೆ ಗೂಗಲ್ ನಿಂದ ರಿವಾರ್ಡ್ ಪಾಯಿಂಟ್ ಲಿಂಕ್ ಬಂದಿದ್ದು, ಫಾರಂಭರ್ತಿ ಮಾಡಿದ 15 ನಿಮಿಷಗಳಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸ ಹೋಗಿದ್ದಾರೆ.

ಹಂಗಳೂರು ಗ್ರಾಮದ ಪ್ರತಾಪ್ (45) ಎಂಬುವರೇ ಮೋಸ ಹೋದವರಾಗಿದ್ದು, ಅವರ ಮೊಬೈಲ್ ಗೆ ಗುರುವಾರ ಮಧ್ಯಾಹ್ನ 12.45ರ ಸುಮಾರಿಗೆ ಗೂಗಲ್ ನಿಂದ ರಿವಾರ್ಡ್ ಪಾಯಿಂಟ್ ಲಿಂಕ್ ಬಂದಿದ್ದು ಕಳುಹಿಸಲಾಗಿದ್ದ ಫಾರಂನಲ್ಲಿ ವಿವರ ಭರ್ತಿ ಮಾಡುವಂತೆ ಸಂದೇಶ ಬಂದಿತ್ತು. ಅದರಂತೆ ಪ್ರತಾಪ್ ಐಸಿಐಸಿಐ ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ್ದರು. 15 ನಿಮಿಷಗಳ ನಂತರ ಕ್ರೆಡಿಟ್ ಕಾರ್ಡ್ ಖಾತೆಯಿಂದ ರೂಪಾಯಿ 98 ಸಾವಿರ ಹಾಗೂ 1 ಲಕ್ಷದ 14 ಸಾವಿರ ರೂಪಾಯಿಗಳನ್ನು ಒಟ್ಟು 2 ಲಕ್ಷದ 12 ಸಾವಿರ ರೂಪಾಯಿಗಳನ್ನು ಸೈಬರ್ ಕಳ್ಳರು ದೋಚಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.