ಅಪ್ರಾಪ್ತ ಬಾಲಕಿಯ ಅತ್ಯಾಚಾರ – ಹಾಸ್ಯನಟ ದರ್ಶನ್ ಗೆ 20 ವರ್ಷ ಜೈಲು !
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರಿಯ ಹಾಸ್ಯನಟ ಹರಿಯಾಣ ಮೂಲದ ದರ್ಶನ್ ಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಘೋಷಿಸಿ ಹರಿಯಾಣ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ADJ) ಸುನೀಲ್ ಜಿಂದಾಲ್ ಅವರ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಸೆಪ್ಟೆಂಬರ್ 2020 ಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಹರಿಯಾಣದ ಅಗ್ರಹಾ ಪ್ರದೇಶದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿಸಿದ್ದರು. ಯೂಟ್ಯೂಬ್‌ನಲ್ಲಿನ ಹಾಸ್ಯ ವೀಡಿಯೊಗಳಿಗೆ ಹೆಸರುವಾಸಿಯಾದ ದರ್ಶನ್, ತನ್ನ ವೀಡಿಯೊವೊಂದರಲ್ಲಿ ನಟಿಸುವ ನೆಪದಲ್ಲಿ ಬಾಲಕಿಗೆ ಆಮಿಷವೊಡ್ಡಿದ್ದ. ದರ್ಶನ್ ಸೆಪ್ಟೆಂಬರ್ 21, 2020 ರಂದು ಅಪ್ರಾಪ್ತಯನ್ನು ಸಂಪರ್ಕಿಸಿ ವೀಡಿಯೊ ಶೂಟ್‌ಗೆ ಬರುವಂತೆ ಕೇಳಿದ್ದರು. ವೀಡಿಯೊ ಶೂಟ್ ನಂತರ, ಚಂಡೀಗಢಕ್ಕೆ ಹೋಗುವಂತೆ ದರ್ಶನ್ ಕೇಳಿದ್ದು ಇದನ್ನು ಬಾಲಕಿ ನಿರಾಕರಿಸಿದ್ದಳು. ಆಗ ಬೆದರಿಕೆ ಹಾಕಿದ್ದಲ್ಲದೇ ನಂತರ ದರ್ಶನ್ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ದು, ಅಲ್ಲಿ ಹೋಟೆಲ್ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ಥೆ ಪರ ವಕೀಲೆ ರೇಖಾ ಮಿತ್ತಲ್ ಹೇಳಿದ್ದಾರೆ.
ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ, ಸೆಕ್ಷನ್ 363 ರ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ, ಸೆಕ್ಷನ್ 343 ರ ಅಡಿಯಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ ಮತ್ತು ಸೆಕ್ಷನ್ 506 ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ ವಿಧಿಸಲಾಗಿದೆ. ಮಾರ್ಚ್ 11 , 2025ರಂದು ಆರೋಪ ಸಾಬೀತಾಗಿದ್ದು, ಅಪರಾಧಿ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.