ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು
ಕುಂದಾಪುರ: ರಾತ್ರಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಹೋಂಡಾ ಡಿಯೋ ಸ್ಕೂಟರ್ ಬೆಳಿಗ್ಗೆ ಎದ್ದು ನೋಡುವಾಗ ನಾಪತ್ತೆಯಾದ ಘಟನೆ ಕುಮದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಶಿ ಎಂಬಲ್ಲಿ ನಡೆದಿದೆ. ಕುಮಭಾಸಿಯ ಗಣೇಶ್ (37) ಎಂಬುವರೇ ಸ್ಕೂಟರ್ ಕಳೆದುಕೊಂಡವರು.

ಗಣೇಶ್ ಫೆಬ್ರುವರಿ 18ರಂದು ಮಂಗಳವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಅಂಗಳದಲ್ಲಿಟ್ಟಿದ್ದ ಸ್ಕೂಟರನ್ನು ಗಮನಿಸಿ ಬಳಿಕ ಮನೆಯಲ್ಲಿ ಮಲಗಿದ್ದರು. ಮಾರನೇ ದಿನ ಅಂದರೆ ಫೆಬ್ರುವರಿ 19ರಂದು ಬೆಳಿಗ್ಗೆ 6 ಗಂಟೆಗೆ ಎದ್ದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಬೆಳಿಕಗೆ ಬಂದಿದೆ.
ಕಳುವಾದ ಸ್ಕೂಟರ್ ಮೌಲ್ಯ 25 ಸಾವಿರ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.