*ಕುಂದಾಪುರ : ನಾಳೆಯಿಂದ ಫೆ. 16ರ ತನಕ ಕೋಡಿಯಲ್ಲಿ ಕುಂದ ಉತ್ಸವ – ಭರದಿಂದ ಸಾಗುತ್ತಿದೆ ಸಕಲ ಸಿದ್ಧತೆ*
ಕುಂದಾಪುರ :ಟೀಮ್ ಕುಂದಾಪುರದ ಪ್ರಸ್ತುತಿಯಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 16ರ ತನಕ ಕೋಡಿಯಲ್ಲಿ ಕುಂದ ಉತ್ಸವ-2025 ಐದು ದಿನಗಳ ಅದ್ದೂರಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉದ್ಯಮಿ, ಕುಂದ ಉತ್ಸವದ ರೂವಾರಿ ದಿನೇಶ ಹೆಗ್ಡೆ ಮೊಳಹಳ್ಳಿ ಹೇಳಿದ್ದಾರೆ.

ಫೆ.12 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಯೋಗ, ಬೀಚ್ ಸ್ವಚ್ಛತಾ ಕಾರ್ಯಕ್ರಮ, ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, 8 ಗಂಟೆಗೆ ಕುಂದ ಉತ್ಸವ ಉದ್ಘಾಟನೆಗೊಳ್ಳಲಿದೆ. ಬಳಿಕ ಶಿವಾನಿ ಮ್ಯೂಸಿಕಲ್ಸ್ ಇವರ ಸಂಯೋಜನೆಯಲ್ಲಿ ಝಿ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ. ಫೆ.13ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆ ನಡೆಯಲಿದೆ. ಫೆ.14ರಂದು ಸಂಜೆ 7 ಗಂಟೆಗೆ ಝಿ ಕನ್ನಡ ಡಿ.ಕೆ.ಡಿ ಖ್ಯಾತಿಯ ಶಿಪಾಲಿ ಪೂಜಾರಿ ಹಾಗೂ ಶಿವಾನಿ ಪೂಜಾರಿ ಇವರ ಭಾಗವಹಿಸುವಿಕೆಯಲ್ಲಿ ಸುಧೀರ್ ಉಳ್ಳಾಲ ನೇತೃತ್ವದ ಸಿಟಿ ಗೈಸ್-ಕುಡ್ಲ ಕ್ವೀನ್ಸ್ ಇವರಿಂದ ಡ್ಯಾನ್ಸ್ ಧಮಾಕಾ ಬಳಿಕ ಸಭಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಅಂತರಾಷ್ಟ್ರೀಯ ಮಟ್ಟದ ಬೀಟ್-ಗುರುಸ್ ಇವರಿಂದ ಬೀಟ್ ಶೋ (ಇಂಡೋ-ಅರೇಬಿಯನ್-ಆಫ್ರಿಕನ್ ಜುಗಲ್‍ಬಂದಿ) ನಡೆಯಲಿದೆ. ಫೆ.15ರಂದು ಸಂಜೆ 7 ಗಂಟೆಗೆ ಟೀಮ್ ಎಮ್.ಸಿ.ಎಸ್ ಇವರಿಂದ ಚಂಡೆ-ವಯೋಲಿನ್ ಫ್ಯೂಷನ್, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಚಂದನ್ ಶೆಟ್ಟಿ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್, ರಾತ್ರಿ 10 ಗಂಟೆಗೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಫೆ.16ರಂದು ಸಂಜೆ 4 ಗಂಟೆಗೆ ಗಾಳಿಪಟ ಉತ್ಸವ, ಸಂಜೆ 7 ಗಂಟೆಗೆ ಫ್ಲೈ_ಬೋರ್ಡ್ ನೈಟ್ ಶೋ, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 10 ಗಂಟೆಯಿಂದ ಅನನ್ಯ ಭಟ್ ಮತ್ತು ತಂಡದವರಿಂದ ಲೈವ್ ಆರ್ಕೆಸ್ಟ್ರಾ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಖ್ಯಾತ ನಿರೂಪಕಿ ಅನುಶ್ರೀ ಭಾಗವಹಿಸಲಿದ್ದಾರೆ ಎಂದರು.

ಫೆಬ್ರುವರಿ 15ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ , ಫೆಬ್ರುವರಿ 16ರಂದು ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಶಾಸಕರು, ಸಂಸದರು, ಬೇರೆ ಬೇರೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿದ್ದು, ಕೋಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ಕುಂದ ಉತ್ಸವದಲ್ಲಿ ಸುಮಾರು 150ಕ್ಕೂ ಹೆಚ್ಚು ವಿವಿಧ ಮಳಿಗೆಗಳು ಇರಲಿವೆ. ಸಂಗೀತ, ನೃತ್ಯದ ಜೊತೆಗೆ ಆಹಾರ ಮಳಿಗೆಗಳು, ಜಾಯ್ ರೈಡ್, ಮನೋರಂಜನಾ ಪಾರ್ಕ್ ಮೊದಲಾದವುಗಳು ಇರುತ್ತದೆ ಎಂದರು. ವಾಹನ ನಿಲುಗಡೆಗೆ ಚಕ್ರಮ ದೇವಸ್ಥಾನದ ಪರಿಸರ, ಬ್ಯಾರಿಸ್ ಕಾಲೇಜು ವಠಾರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.