BlogEducationEntertainmentHighlightsLifestyleLocal newsNational NewsOthersSportsState newsSuccess storiesTechTop StoriesTrendingWorld

ರಾಷ್ಟ್ರ ಮಟ್ಟದ ಕರಾಟೆಯಲ್ಲಿ  ಮೊಹಮ್ಮದ್ ಸಫಾನ್ ಕಾಝಿ ಗ್ರಾಂಡ್ ಚಾಂಪಿಯನ್

Aware others:

ಕುಂದಾಪುರ: ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಡ್ಲೂರಿನ ಮೊಹಮ್ಮದ್ ಸಫಾನ್ ಕಾಝಿ ಕಟಾ ಹಾಗೂ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಿದ್ದಾರೆ.

ಅಕ್ಟೋಬರ್ 20ರಂದು ಭಟ್ಕಳದಲ್ಲಿ ಅಮರ್ ಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೇಯಲ್ಲಿ 14 ವರ್ಷದ ವಯೋಮಾನದ ಒಳಗಿನ ಕಟಾ ಹಾಗೂ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸ್ಪರ್ಧೆಯ ಆಯೋಜಕರು ಗ್ರಾಂಡ್ ಚಾಂಪಿಯನ್ ಟ್ರೋಫಿಯ ಜೊತೆಯಲ್ಲಿ ಒಂದು ಸೈಕಲ್ ಅನ್ನು ಕೂಡಾ ಬಹುಮಾನ ರೂಪದಲ್ಲಿ ನೀಡಿದ್ದಾರೆ. ಮೊಹಮ್ಮದ್ ಸಫಾನ್ ಕಾಝಿ ಕಂಡ್ಲೂರಿನ ಜೀಯಾ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿ. ಬಿಸ್ಮಿಲ್ಲಾ ಯಾಸ್ಮಿನ್ ಹಾಗೂ ಶೇಕ್ ಸಹೀದ್ ಮಕ್ಬುಲ್ ಇವರ ಪುತ್ರನಾಗಿರುವ ಮೊಹಮ್ಮದ್ ಸಫಾನ್ ಕಾಝಿ, ಕೆ.ಡಿ.ಎಫ್. ಕರಾಟೆ ಅಂಡ್ ಫಿಟ್ನೆಸ್ ಅಕಾಡೆಮಿ, ಕುಂದಾಪುರ ಇಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು, ಕರಾಟೆ  ಶಿಕ್ಷಕ ಕಿರಣ್ ಕುಂದಾಪುರ, ಸಂದೀಪ್ ವಿ. ಕಿರಣ್ ಹಾಗೂ ಶಿಹಾನ್ ಶೇಕ್ ಇವರು ತರಬೇತಿ ನೀಡುತ್ತಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!